ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ಜಾಗೃತಿ ಬಗ್ಗೆ ಮೂಡಿಸಿರುವ ಅವರು ಸುರಕ್ಷಿತ ಅಂತರ ಕಾಪಾಡುವುದರೊಂದಿಗೆ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅವಳಿ ನಗರದ ಮನೆಮಾತಾಗಿರುವ PublicNext ಮಾಧ್ಯಮ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿವ ಪ್ರಹ್ಲಾದ್ ಜೋಶಿ ಅವರು, ನಮ್ಮ ಭಾಗದ ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ ಧಾರವಾಡದಲ್ಲಿ ಜನಪ್ರಿಯತೆ ಹೊಂದಿರುವ ಡಿಜಿಟಲ್ ಸುದ್ದಿ ವಾಹಿನಿಯಾಗಿದೆ. ಅದು App ಮೂಲಕ ಸುದ್ದಿಗಳನ್ನು ಕಳುಹಿಸುತ್ತಿದೆ. ಈ App ನ್ನು ಎಲ್ಲರೂ ಡೌನ್ ಲೋಡ್ ಮಾಡಿಕೊಂಡರೆ ಹುಬ್ಬಳ್ಳಿ ಧಾರವಾಡ ಸುತ್ತಮುತ್ತಲಿನ ಸುದ್ದಿಗಳನ್ನು ತ್ವರಿತವಾಗಿ ತಿಳಿಯಲು ಸಾಧ್ಯವಾಗುತ್ತದೆ. ಹೀಗಾಗಿ PublicNext App ನ್ನು ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಿರುವ ಅವರು, ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಎಲ್ಲ ಓದುಗರಿಗೆ ದೀಪಾವಳಿ ಶುಭ ಹಾರೈಸಿದ್ದಾರೆ.
Kshetra Samachara
14/11/2020 06:55 pm