ಮಹಾಮಾರಿ ಕೊರೊನಾದಿಂದ ಜರ್ಜರಿತವಾಗಿರುವ ಜನ ಸಾಮಾನ್ಯರ ಬದುಕು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ವಾಣಿಜ್ಯ ಚಟುವಟಿಕೆಗಳು ಗರಿಗೆದರಿದ್ದರಿಂದ ವ್ಯಾಪಾರಿಗಳಲ್ಲಿ ಉತ್ಸಾಹ ಚಿಮ್ಮುತ್ತಿದೆ. ಆದರೆ ಶಾಲೆಗಳು ಮುಚ್ಚಿದ್ದರಿಂದ ಮಕ್ಕಳ ಆಟ, ಪಾಠ, ಮನರಂಜನೆಗೆ ಸಂಪೂರ್ಣ ಬ್ರೇಕ್. ಅದರಲ್ಲೂ ನವೆಂಬರ್ 14, ಸಂಭ್ರಮದ ಮಕ್ಕಳ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಅವರಲ್ಲಿ ನಿರಾಸೆ ಭಾವ ಹೆಚ್ಚಾಗ ತೊಡಗಿದೆ.
ಪುಟಾಣಿಗಳೇ ಬೇಜಾರಾಗಬೇಡಿ... ಮಕ್ಕಳ ದಿನಾಚರಣೆಯನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜತೆ ಆಚರಿಸಿ. ಅದು ಹೇಗಪ್ಪಾ ಅಂದರೆ ರಂಗು ರಂಗಿನ, ಬಟ್ಟೆ ಧರಿಸಿದ ಸುಂದರ ಫೋಟೋ ನಮಗೆ ಕಳಿಸಿ. ಮಗುವಿನೊಂದಿಗಿರುವ Selfy ಬೇಡ. ಇತ್ತೀಚಿನ ಫೋಟೊಗಳು ಮಾತ್ರ ಸ್ಪರ್ಧೆಗೆ ಅರ್ಹ.
ಆಯ್ಕೆಯಾದ ಆಕರ್ಷಕ ಫೋಟೊಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. 2 ರಿಂದ 5 ವರ್ಷದೊಳಗಿನ ಮಕ್ಕಳ ಫೋಟೊವನ್ನು ನಮ್ಮ WhatsApp ನಂ 73496-19443 ಗೆ ಕಳಿಸಬೇಕು. ಫೊಟೊದೊಂದಿಗೆ ಮಗುವಿನ ಹೆಸರು, ವಯಸ್ಸು, ಪಾಲಕರ ಮೊಬೈಲ್ ನಂ ತಪ್ಪದೆ ಕಳಿಸುವುದು.
ಹಾಂ...ನೆನಪಿರಲಿ ಫೋಟೊ ನಮಗೆ ತಲುಪುವ ಕೊನೆಯ ದಿನಾಂಕ 13 ನೇ ನವೆಂಬರ್ ಸಂಜೆ 6 ಗಂಟೆ.
Kshetra Samachara
09/11/2020 08:13 am