ನವಲಗುಂದ : ತಾಲೂಕಿಗೆ ಲಿಂಬಿ ನಿಗಮ ಭೇಟಿ ನೀಡಿ ಈ ಭಾಗದಲ್ಲಿ ಲಿಂಬೆ ಬೆಳೆ, ಪೇರಲ, ಸಿತಾ ಫಲ, ತೆಂಗು ಬೆಳೆ ಬೆಳೆಯಲು ಪ್ರೋತ್ಸದಾಯಕ ಮಾತುಗಳ ಕೃಷಿ ಬೆಳೆಗಳ ಜೊತೆಯಲ್ಲಿ ತೋಟಗಾರಿಕೆ ಬೆಳೆಗಳ ಹಾಗೂ ನರ್ಸರಿಗೆ ಭೇಟಿ ನೀಡಿದರು.
ತೋಟಗಾರಿಕೆ ರೈತರ ಉತ್ಪಾದಕರ ಸಂಘ ನಿರ್ಮಾಣ ಮಾಡಿ ಇದರ ಮೂಲಕ ತೋಟಗಾರಿಕೆ ಬೆಳೆ ವಿಸ್ತೀರ್ಣ ಹಾಗೂ ಉತ್ಪಾದಕತೆ ಮತ್ತು ತೋಟಗಾರಿಕೆಯಲ್ಲಿ ಯಾಂತ್ರಿಕರಣ ಹೆಚ್ಚಿಸಲು ಸಲಹೆ ನೀಡಿದರು. ಮತ್ತು ಇಲಾಖೆ ಕಚೇರಿ ನರ್ಸರಿಯಲ್ಲಿ “ ನೈಸರ್ಗಿಕ ಕೃಷಿಗೆ ಒತ್ತು ನೀಡಲು ಹೇಳಿದರು ' ಕೃಷಿ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಯಾದ ಡಾ || ರಾಜೇಂದ್ರ ಪೂತಾರ ಇವರ ಸಹಯೋಗದೊಂದಿಗೆ ಸವಳ ಜವಳ ಭೂಮಿಯ ನಿರ್ವಹಣೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಶಿಂಧಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಚಂದ್ರಶೇಖರ ನಾಗನೂರ, ಭಾಜಪ ಸಂಘದ ಕಾರ್ಮಿಕ ಮುತ್ತು ಶಹಬಾದಿ, ನವಲಗುಂದ ತಾಲೂಕು ಭಾರತಿಯ ಜನತಾ ಪಾರ್ಟಿ ಅಧ್ಯಕ್ಷ ಎಸ್ಬಿ ದಾನಪ್ಪಗೌಡ್ರ, ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಂಜೀವಕುಮಾರ ಗುಡಿಮನಿ ಮತ್ತು ಕಛೇರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Kshetra Samachara
28/08/2021 05:55 pm