ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ವತಿಯಿಂದ ಫೆ.11ರಂದು ಆಯೋಜಿಸಲಾಗಿರುವ ವೆಬಿನಾರ್ ನಲ್ಲಿ ಹಿರಿಯ ನಟ ಅಮೀರ್ ಖಾನ್ ಅವರು ಕೂಡ ಭಾಗವಹಿಸಿ People Movement for Rural Development(ಗ್ರಾಮೀಣಾಭಿವೃದ್ಧಿಗಾಗಿ ಜನರ ಚಳುವಳಿ) ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಫೆಬ್ರವರಿ 11 ರಂದು ಸಂಜೆ 6 ಗಂಟೆಗೆ ವೆಬ್ ನಾರ್ ನಡೆಯಲಿದ್ದು,
ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ.ಗುರುರಾಜ್ ದೇಶಪಾಂಡೆ, ಪಾನಿ ಫೌಂಡೇಶನ್ ಸಹ-ಸಂಸ್ಥಾಪಕರಾಗಿರುವ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಮತ್ತು ಪಾನಿ ಪ್ರತಿಷ್ಠಾನದ ಸಿಇಒ ಸತ್ಯಜಿತ್ ಭಟ್ಕಲ್ ಅವರು ವೆಬ್‌ನಾರ್‌ನ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು,ನೋಂದಾಯಿತರಿಗೆ ವೆಬ್‌ನಾರ್‌ಗಾಗಿ ಜೂಮ್ ಲಿಂಕ್ ಕಳುಹಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ದೇವಕಿ ಪುರೋಹಿತ್ ಅವರನ್ನು 9623468822 ಗೆ ಸಂಪರ್ಕಿಸಬಹುದು ಎಂದು ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್ ತಿಳಿಸಿದ್ದಾರೆ.
Kshetra Samachara
05/02/2021 12:23 pm