ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೆ.29 ರಂದು ಪಂಜ ಕುಸ್ತಿ ಪಂದ್ಯಾವಳಿ

ಧಾರವಾಡ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ಸಹಕಾರದೊಂದಿಗೆ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿರುವ ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ 7ನೇ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಮತ್ತು 4ನೇ ವಿಶೇಷ ಚೇತನರ ಪಂಜ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.

ಮಹಿಳೆಯರಿಗಾಗಿ ಮೈಸೂರು ದಸರಾ ಕುಮಾರಿ 2022 ರ ಪ್ರಶಸ್ತಿಗಾಗಿ ಸ್ಪರ್ಧೆ, ಪುರುಷರಿಗಾಗಿ ಮೈಸೂರು ದಸರಾ ಶ್ರೀ 2022 ರ ಪ್ರಶಸ್ತಿಗಾಗಿ ಸ್ಪರ್ಧೆ, ವಿಶೇಷ ಚೇತನ ಮಹಿಳೆಯರಿಗಾಗಿ ದಸರಾ ನವಚೇತನ ತಾರೆ 2022 ರ ಪ್ರಶಸ್ತಿಗಾಗಿ ಸ್ಪರ್ಧೆ, ವಿಶೇಷ ಚೇತನ ಪುರುಷರಿಗಾಗಿ ದಸರಾ ವಿಶೇಷ ಚೇತನರು 2022 ರ ಪ್ರಶಸ್ತಿಗಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಹೆಚ್ಚಿನ ವಿವರಗಳಿಗಾಗಿ ಎಸ್.ಜೆ.ಹರ್ಷವರ್ಧನ, ಕಾರ್ಯದರ್ಶಿ, ದಸರಾ ಮಹೋತ್ಸವ ಕುಸ್ತಿ ಉಪಸಮಿತಿ-2022 ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ ಮೈಸೂರು, ನಂ984, ಮೊದಲನೇ ಮಹಡಿ, ಗೀತಾ ರಸ್ತೆ ಚಾಮರಾಜಪುರಂ, ಮೈಸೂರು-570005, ಅಥವಾ ದೂರವಾಣಿ 0821-2333666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

27/09/2022 08:59 pm

Cinque Terre

33.56 K

Cinque Terre

0

ಸಂಬಂಧಿತ ಸುದ್ದಿ