ಕಲಘಟಗಿ: ರಾಜ್ಯದ ಎಸ್ ಸಿ ಹಾಗೂ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸದಿದ್ದರೆ ಸಮುದಾಯದ ಬಾಂಧವರು ಅಕ್ಟೋಬರ್ 9ರಂದು ವಾಲ್ಮೀಕಿ ಜಯಂತಿ ಆಚರಣೆಗೆ ಭಾಗವಹಿಸುವುದಿಲ್ಲ ಎಂದು ಪಟ್ಟಣದಲ್ಲಿ ತಹಶೀಲ್ದಾರ ಯಲ್ಲಪ್ಪ ಗೊಣ್ಣೆಣವರಿಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕ ಪಂಚಾಯತಿ ಸಭಾಭವನದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ತಾಲ್ಲೂಕ ಆಡಳಿತದಿಂದ ಹಮ್ಮಿಕೊಂಡ ಪೂರ್ವ ಬಾವಿ ಸಭೆಗೆ ಸಮಾಜದ ಬಾಂಧವರು ಹಾಜರಾಗದೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಹೊರ ನಡೆದರು.
ನಂತರ ಮಾತನಾಡಿದ ವಾಲ್ಮೀಕಿ ಸಮಾಜದ ಯುವ ಮುಖಂಡ ರಮೇಶ್ ಸೋಲಾರಗೋಪ್ಪ ವಾಲ್ಮೀಕಿ ಗುರುಪೀಠದ ಪ್ರಸಾನ್ನಾನಂದ ಪುರಿ ಸ್ವಾಮೀಜಿಗಳು ಪರಿಶಿಷ್ಟ ಜಾತಿಗೆ 15 ರಿಂದ 17.5 ಪರಿಶಿಷ್ಟ ಪಂಗಡದ ಸಮಾಜಕ್ಕೆ 3 ರಿಂದ 7.5 ಮೀಸಲಾತಿ ಹೆಚ್ಚಿಸಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 230 ದಿನಗಳಿಂದ ಅಹೋರಾತ್ರಿ ಧರಣಿ ಕೈಗೊಂಡರು ಸರ್ಕಾರ ಹಾಗೂ ಸಮಾಜದ ಸಚಿವರು ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸರ್ಕಾರಕ್ಕೆ ಸ್ವಾಮೀಜಿಗಳು ಸೆ.28 ರ ಗಡುವಿನ ಒಳಗೆ ನೀಡದಿದ್ದರೆ ಅ.9 ರಂದು ಜರುಗುವ ವಾಲ್ಮೀಕಿ ಜಯಂತಿ ಸಮಾಜದ ಶಾಸಕರ ಹಾಗೂ ಸಚಿವರಿಗೆ ಭಾಗವಹಿಸದಂತೆ ತಡೆಹಿಡಿದು ಸರ್ಕಾರಕ್ಕೆ ಕಪ್ಪುಬಟ್ಟಿ ಪ್ರದರ್ಶಿಸಿ ಕರ್ನಾಟಕ ರಾಜ್ಯದಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ತಾಲ್ಲೂಕ ಅಧ್ಯಕ್ಷ ಪಕ್ಕೀರಗೌಡ ದೊಡ್ಡಮನಿ ಶಶಿಕುಮಾರ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಪಕ್ಕೀರೇಶ ಅಪ್ಪಣ್ಣವರ, ಹೊಳೆಪ್ಪ ಗಾಮಣ್ಣವರ, ಚಂದ್ರು ತಳವಾರ ನಾಗಪ್ಪ ಅಜ್ಜುನವರ, ಪರಶುರಾಮ ಎತ್ತಿನಗುಡ್ಡ ಗಂಗಪ್ಪ ಹುಡೇದ,ರಾಮಣ್ಣ ವಾಲಿಕಾರ, ಶಿವಾಜಿ ವಡ್ಡರ ಮಂಗಲಪ್ಪ ಲಮಾಣಿ ಶರೀಫ ಹರಿಜನ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರು ಉಪಸ್ಥರಿದ್ದರು.
Kshetra Samachara
27/09/2022 04:21 pm