ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆ ಮಾರ್ಗದಲ್ಲಿರುವ ಮಿತ್ರಾ ಶಿಕ್ಷಣ ಸಂಸ್ಥೆಯ ಪವನ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ಮತ್ತು ಎಲ್‌ಕೆಜಿ ವಿಭಾಗದಿಂದ ಪರಿಸರ ಜಾಗೃತಿ ಮತ್ತು ಸಾಂಸ್ಕೃತಿಕ ಪರಿಸರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಯಬೇಕು. ಮಕ್ಕಳು ಪರಿಸರ ಪ್ರಜ್ಞೆ ಹೊಂದುವುದರ ಮೂಲ ಪ್ರಾಣಿ, ಪಕ್ಷಿ, ಗಿಡ, ಮರ, ಪ್ರಕೃತಿ ಹೀಗೆ ಎಲ್ಲವನ್ನು ಪ್ರೀತಿಸಬೇಕು ಮತ್ತು ಅದನ್ನು ಸಂರಕ್ಷಿಸಬೇಕು. ಎನ್ನುವ ಉತ್ಕೃಷ್ಟ ಉದ್ದೇಶ ಮೀತ್ರಾ ಶಿಕ್ಷಣ ಸಂಸ್ಥೆಯದ್ದಾಗಿತ್ತು.
ಈ ಪರಿಸರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪವನ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ಮತ್ತು ಎಲ್‌ಕೆಜಿಯ ಪುಟ್ಟ ಪುಟ್ಟ ಮಕ್ಕಳು ಹಲವಾರು ವೇಷಭೂಷಣಗಳನ್ನು ಧರಿಸಿ ತಮ್ಮ ಹಾವ, ಭಾವಗಳ ಮೂಲಕ ವಿಕ್ಷೀಸಲು ಬಂದಿದ್ದ ಪಾಲಕರ ಸಮುದಾಯದಲ್ಲಿಯೂ ಪರಿಸರ ಜಾಗೃತಿಯ ಮೊಳಕೆ ಒಡೆಸಿದರು.
ನವಿಲು, ಕಮಲ, ಹುಲಿ, ಕರಡಿ, ಮರ, ಮೊಲ, ಜಿಂಕೆ, ವಿವಿಧ ಬಗೆಯ ಹಣ್ಣು, ಕಾಯಿಪಲ್ಲೆ ಹೀಗೆ ನಿಸರ್ಗದ ನೋಟಗಳನ್ನು ಎಲ್ಲ ತಮ್ಮ ವೇಷ ಮತ್ತು ಮಾತುಗಾರಿಕೆಯ ಮೂಲಕ ಬಿಂಬಿಸಿದ್ದು, ಪರಿಸರ ಜಾಗೃತಿಯ ಜೊತೆಗೆ ಪರಿಸರ ಪ್ರೀತಿಗೆ ಸಾಕ್ಷಿಯಾಗಿತ್ತು.
ಮಕ್ಕಳಲ್ಲಿ ಬಾಲ್ಯದಿಂದಲೇ ನೈತಿಕತೆ, ಪರಿಸರ, ಶಿಕ್ಷಣ, ಸಂಸ್ಕಾರ, ರಾಷ್ಟ್ರ ಪ್ರೇಮ ಹೀಗೆ ಎಲ್ಲವನ್ನು ಮಕ್ಕಳಲ್ಲಿ ತುಂಬವ ಕಾರ್ಯವನ್ನು ಪವನ ಆಂಗ್ಲ ಮಾಧ್ಯಮ ಶಾಲೆ ಸಮರ್ಥವಾಗಿ ನಿರ್ವಹಿಸುತ್ತಿರುವುದಕ್ಕೆ ಇಂದಿನ ಪರಿಸರ ಸಾಂಸ್ಕೃತಿಕ ಮಕ್ಕಳ ಕಾರ್ಯಕ್ರಮ ಸಾಕ್ಷಿಯಾಗಿತ್ತು.
ಮಿತ್ರಾ ಶಿಕ್ಷಣ ಸಂಸ್ಥೆಯ ರತ್ನಾ ಪಾಟೀಲ, ಪವನ ಆಂಗ್ಲ ಮಾಧ್ಯಮದ ಪ್ರಾಚಾರ್ಯ ವಿಕ್ರಮ್, ಪ್ರವೀಣಾ, ಅಶ್ವಿನಿ ಕುಂಬಾರಗೌಡರ, ನರ್ಸರಿ, ಯುಕೆಜಿ, ಎಲ್‌ಕೆಜಿ ಶಿಕ್ಷಕರಾದ ಸೌಮ್ಯಾ, ವೀಣಾ, ವಿದ್ಯಾ ಹಾಗೂ ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
15/09/2022 08:41 am