ಹುಬ್ಬಳ್ಳಿ: 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧಾರವಾಡ ಮಹಾನಗರ ಜಿಲ್ಲಾ ಜನತಾದಳ ಜ್ಯಾತ್ಯತೀತ ಪಕ್ಷದ ಯುವ ಮುಖಂಡರಾದ ಸಿದ್ದಲಿಂಗೇಶ್ವರಗೌಡ ಮಹಾಂತ ಒಡೆಯರ ಅವರ ನೇತೃತ್ವದಲ್ಲಿ, ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು. ಹುಬ್ಬಳ್ಳಿ ನಗರದ ಕೇಶ್ವಾಪೂರದ ವೃದ್ಧಾಶ್ರಮದಲ್ಲಿರವ ಹಿರಿಯರಿಗೆ ಊಟದ ಸೇವೆ ಮಾಡಿ ಆಚರಿಸಲಾಯಿತು.
ಜೆಡಿಎಸ್ ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಗುರುರಾಜ ಹುಣಸಿಮರದ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ ಎಲ್ಲರಿಗೂ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಗಡದಿನ್ನಿ, ಗಂಗಾಧರ ಪೆರೂರ, ಪರ್ವೇಜ್ ಅಹ್ಮದ್ ಕಟ್ಟೀಮನಿ, ವಿನಾಯಕ ಗಾಡಿವಡ್ಡರ, ಫತೇಶಾ ಯರಗಟ್ಟಿ, ನಾಗಭೂಷಣ ಕಾಳೆ, ಪುನಿತ್ ಅಡಗಲ್ಲ, ಬಾಷಾ ಮುದ್ಗಲ್, ನಾಗರಾಜ್ ಗುಡದರಿ, ಮಲ್ಲಿಕಾರ್ಜುನ ಗುಡದೂರ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನವೀನಕುಮಾರ. ಮ. ನಿರೂಪಿಸಿದರು.
Kshetra Samachara
15/08/2022 02:26 pm