ಹುಬ್ಬಳ್ಳಿ: ನಗರದ ರಾಯಾಪುರ ಹತ್ತಿರ ವಿರುವ ಹರೆ ಕೃಷ್ಣ ಮಂದಿರದ ಗೋಶಾಲೆಯಲ್ಲಿ, ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ಅದನ್ನು ಕಂಡ ಸಾರ್ವಜನಿಕರು ಗಾಬರಿಗೊಂಡು ಉರಗ ತಜ್ಞ ಸ್ನೇಕ್ ನಾಗರಾಜ್ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ನಾಗರಾಜ್, ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.
Kshetra Samachara
10/08/2022 08:51 pm