ಧಾರವಾಡ: ಗೋವಾದ ಮಡಗಾವ್‌ದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಧಾರವಾಡದ ಲಯನ್ಸ್ ಕ್ಲಬ್ ಗ್ಯಾಲಕ್ಸಿಯ ಕಾರ್ಯದರ್ಶಿ ಡಾ.ಎಸ್.ವೈ.ಶೇಖ್ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ಎಂಬ ಪ್ರಶಸ್ತಿ ಲಭಿಸಿದೆ.
ಅಂತರರಾಷ್ಟ್ರೀಯ ಲಯನ್ಸ್ ಕ್ಲಬ್ ವತಿಯಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಹಸಿವು ನಿವಾರಣೆ, ಮಧುಮೇಹ ಜಾಗೃತಿ, ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ, ಪರಿಸರ ಜಾಗೃತಿ ಕುರಿತು ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹಿನ್ನೆಲೆಯಲ್ಲಿ ಧಾರವಾಡ ಲಯನ್ಸ್ ಕ್ಲಬ್ ಗ್ಯಾಲಕ್ಸಿಯ ಕಾರ್ಯದರ್ಶಿ ಡಾ.ಎಸ್.ವೈ.ಶೇಖ್ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇನ್ನು ಈ ಎಲ್ಲಾ ಕಾರ್ಯಕ್ರಮಗಳ ರೂವಾರಿ ಲಯನ್ಸ್ ಕ್ಲಬ್ ಗ್ಯಾಲಕ್ಸಿ ಅಧ್ಯಕ್ಷ ಡಾ.ನಾಗರಾಜ ಗುಡಗಣ್ಣವರ ಅವರಿಗೂ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಲಭಿಸಿದೆ.
ಲಯನ್ಸ್ ಕ್ಲಬ್ ಹಿಂದಿನ ಗವರ್ನರ್ ಲಯನ್ ಶ್ರೀಕಾಂತ ಮೋರೆ, ಲಯನ್ ಸುಗ್ಲಾ ಎಲೆಮನೆ, ಲಯನ್ ಬಿಟ್ರೋ, ಲಯನ್ ಮನೋಜ್ ಹಾಗೂ ಮಾಣಿಕ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
19/07/2022 07:41 pm