ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಣವಿ ಕವಿತೆಗಳ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ: ನರಹಳ್ಳಿ

ಧಾರವಾಡ: ನಾಡೋಜ ಡಾ.ಚೆನ್ನವೀರ ಕಣವಿ ಅವರ ತಾತ್ವಿಕ ನೆಲೆಯಲ್ಲಿನ ಕವಿತೆಗಳ ಆಳವಾದ ಅಧ್ಯಯನದ ಅಗತ್ಯವಿದೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಾಡೋಜ ಡಾ. ಚೆನ್ನವೀರ ಕಣವಿ ಹಾಗೂ ಶಾಂತಾದೇವಿ ಕಣವಿ ಸಂಸ್ಮರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕೆಎಸ್ ನರಸಿಂಹಸ್ವಾಮಿ, ಡಾ. ಚೆನ್ನವೀರ ಕಣವಿ ಹಾಗೂ ಸು.ರಂ.ಯಕ್ಕುಂಡಿ ಸಂಘರ್ಷ ಬಯಸದ ಮೃದು ಸಾಹಿತಿಗಳು ಶ್ರೇಷ್ಠ ಕಾವ್ಯ ಶಿಲ್ಪಿಗಳಾಗಿರುತ್ತಾರೆ. ಅವರ ಕಾವ್ಯದ ಕಸುಬುದಾರಿಕೆಯಿಂದ ಇವರು ಶ್ರೇಷ್ಠರಾಗಿದ್ದಾರೆ ಎಂದರು.

ನಮ್ಮ ಸಂಸ್ಕೃತಿಯ ಮಹತ್ವವನ್ನು ಮತ್ತು ನಮ್ಮ ಪರಂಪರೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಹೊಣೆ ಹಿರಿಯ ಸಾಹಿತಿಗಳ ಮೇಲಿದೆ. ಕೇಳುವ ಸಾಮರ್ಥ್ಯ ಇರುವವರಿಗೆ ಬದುಕಿನಲ್ಲಿ ಬಹಳಷ್ಟನ್ನು ಸಾಧಿಸುವ ಅವಕಾಶ ಇರುತ್ತದೆ. ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಸಾತ್ವಿಕತೆಯ ಶಕ್ತಿ ಏನು ಎಂಬುದನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕಿದೆ. ಅದಕ್ಕೊಂದು ಮಾದರಿ ಸೃಷ್ಟಿಸಬೇಕಾಗಿದೆ ಎಂದರು.

ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಮಾತನಾಡಿ, ಡಾ. ಚೆನ್ನವೀರ ಕಣವಿಗೆ ಜ್ಞಾನಪೀಠ ಹಾಗೂ ರಾಷ್ಟ್ರಕವಿ ಸ್ಥಾನಮಾನ ಸಿಗಲಿಲ್ಲ ಎಂಬ ಬೇಸರವಿದೆ. ಹಾಗೆಯೇ ಐದು ಮಕ್ಕಳ ತಾಯಿಯಾಗಿ ದೊಡ್ಡ ಮನೆಯ ಯಜಮಾನಿಯಾಗಿ ಕಥೆಗಳನ್ನು ರಚಿಸಿದ ಶಾಂತಾದೇವಿ ಅವರ ಸಾಹಿತ್ಯ ಸೇವೆಯೂ ಅನನ್ಯ ಎಂದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

28/06/2022 10:22 pm

Cinque Terre

10.34 K

Cinque Terre

0

ಸಂಬಂಧಿತ ಸುದ್ದಿ