ಧಾರವಾಡ: ಧಾರವಾಡದ ಡಿಮಾನ್ಸ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಮನೋವೈದ್ಯರು ಹಾಗೂ ಬೆಂಗಳೂರು ನಿಮಾನ್ಸ್ ಸಂಸ್ಥೆಯ ನಿರ್ದೇಶಕರಾದ ಪ್ರೊ.ಡಾ.ಪ್ರತಿಮಾ ಮೂರ್ತಿ ಮತ್ತು ಧಾರವಾಡದ ಡಿಮಾನ್ಸ್ ನಿರ್ದೇಶಕರಾದ ಡಾ.ಮಹೇಶ ದೇಸಾಯಿ ಅವರು ಡಿಮಾನ್ಸ್ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರನ್ನು ಹಾಕುವುದರ ಮೂಲಕ ಪರಿಸರ ದಿನ ಆಚರಿಸಿದರು.
ಡಿಮಾನ್ಸ್ ಸಂಸ್ಥೆಯ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ಡಿಮಾನ್ಸ್ ಸಂಸ್ಥೆಯ ಚಟುವಟಿಕೆಗಳ ಕುರಿತು ಡಿಮಾನ್ಸ್ ನಿರ್ದೇಶಕರಾದ ಡಾ.ಮಹೇಶ್ ದೇಸಾಯಿ ಮತ್ತು ಸಂಸ್ಥೆಯ ಇತರ ವಿಭಾಗದ ಸಿಬ್ಬಂದಿ ಜೊತೆ ಚರ್ಚಿಸಿದರು.
ನ್ಯಾಯ ವೈದ್ಯಕೀಯ ವಿಭಾಗ, ಹಗಲು ಪಾಲನಾ ಕೇಂದ್ರ, ವ್ಯಸನ ಮುಕ್ತ ಕೇಂದ್ರ ಹಾಗೂ ಆಸ್ಪತ್ರೆಯ ಸ್ಕ್ಯಾನ್ ಸೆಂಟರ್ ವೀಕ್ಷಿಸಿ, ಸೌಲಭ್ಯಗಳ ಮಾಹಿತಿ ಪಡೆದರು.
Kshetra Samachara
06/06/2022 10:16 pm