ಹುಬ್ಬಳ್ಳಿ: ನಗರದ ನ್ಯೂ ಕಾಟನ್ ಮಾರ್ಕೆಟ್ ನಲ್ಲಿರುವ ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಕ್ ವತಿಯಿಂದ ಸಕ್ಕರೆ ಕಾಯಿಲೆ ಕಾಲಿನ ಉಚಿತ ತಪಾಸಣೆ ಶಿಬಿರವನ್ನು ಜೂನ್ 4 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಸುನೀಲ ವಾಸುದೇವ ಕರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಕ್ಕರೆ ಕಾಯಿಲೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಯಾರು ಇದನ್ನು ತಡೆಗಟ್ಟಲು ಕ್ರಮ ಮತ್ತು ಜಾಗೃತಿ ಮಾಡುತ್ತಿಲ್ಲ. ಪ್ರಸ್ತುತವಾಗಿ ಸಕ್ಕರೆ ಕಾಯಿಲೆ ಬಗ್ಗೆ ಜಾಗೃತಿ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 20 ಲಕ್ಷ ಜನರು ಸಕ್ಕರೆ ಕಾಲೆಯಿಂದ ಬಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಆತಂಕ ಎದುರಾಗಿದೆ. ಆದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಲು ಜಾಗೃತಿ ಮೂಡಿಸಬೇಕು. 100 ಜನರಿದ್ದರೆ 15 ರಷ್ಟು ಜನರು ಕಾಲಿಗೆ ಗಾಯ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಕಾಯಿಲೆ ಇರುವವರಿಗೆ ಕಾಲಿನಲ್ಲಿ ನರ ದೋಷವಾದಾಗ ಹೆಚ್ಚಾಗುತ್ತದೆ.
ಆದರಿಂದ ಜನರು ಮುಂಜಾಗೃತವಾಗಿ ಚಿಕಿತ್ಸೆ ಪಡೆಯಬೇಕು. ಕಾಲಿಗೆ ಗಾಯವಾಗದಂತೆ ರಕ್ಷಿಸಬೇಕು. ಪ್ರತಿನಿತ್ಯ ವ್ಯಾಯಾಮ ನರದೋಷವಾಗದಂತೆ ನೋಡಿಕೊಳ್ಳಬೇಕು. ಉತ್ತಮ ಆಹಾರ ಸೇವನೆ ಅಗತ್ಯವಾಗಿದೆ ಎಂದು ಡಾ.ಸುನಿಲ್ ಹೇಳಿದರು.
Kshetra Samachara
01/06/2022 01:05 pm