ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ನಡೆಯುವ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸಬಾರದು; ಬಸವಜಯ ಮೃತ್ಯುಂಜಯ ಸ್ವಾಮೀಜಿ

ನವಲಗುಂದ : ಇಡೀ ಕರ್ನಾಟಕದಲ್ಲೇ ಹೋರಾಟದ ಭೂಮಿ ಅಂದರೆ ಅದು ನವಲಗುಂದ ಹಾಗೂ ನರಗುಂದ. ಈ ಭಾಗದಲ್ಲಿ ಯಾವುದೇ ಹೋರಾಟವಾದರೂ ತಾರ್ಕಿಕ ಅಂತ್ಯ ಕಂಡು ಯಶಸ್ವಿಯಾಗಿದೆ. ಅದೇ ರೀತಿ ನಮ್ಮ ಹೋರಾಟಕ್ಕೂ ಯಶಸ್ಸು ಸಿಗಲಿದೆ ಎಂದು ಪಟ್ಟಣದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹೌದು ನವಲಗುಂದ ಪಟ್ಟಣದ ಗವಿ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ಕರ್ನಾಟಕದಲ್ಲೇ ಹೋರಾಟದ ಭೂಮಿ ಅಂದರೆ ಅದು ನವಲಗುಂದ ಹಾಗೂ ನರಗುಂದ. ಈ ಭಾಗದಲ್ಲಿ ಯಾವುದೇ ಹೋರಾಟವಾದರೂ ತಾರ್ಕಿಕ ಅಂತ್ಯ ಕಂಡು ಯಶಸ್ಸು ಕಂಡಿದೆ. ಹಾಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಇಲ್ಲಿ ಆರಂಭವಾಗಿದೆ. ಈ ಹೋರಾಟ ನವಲಗುಂದದಿಂದಲೇ ಆರಂಭವಾಗಿರುವುದನ್ನು ನೋಡ್ತಾ ಇದ್ರೆ ಸರ್ಕಾರಕ್ಕೆ ದೊಡ್ಡ ಬಿಸಿ ಮುಟ್ಟುವಂತಹ ಭಾವನೆ ವ್ಯಕ್ತವಾಗುತ್ತಿದೆ ಎಂದರು.

ಇನ್ನು ನವಲಗುಂದ ನರಗುಂದದಲ್ಲಿ ಯಾವುದೇ ಹೋರಾಟ ಆದರೂ ಯಶಸ್ಸು ಸಿಕ್ಕಿದೆ. ಅದೇ ರೀತಿ ನಮ್ಮ ಹೋರಾಟಕ್ಕೂ ಯಶಸ್ಸು ಸಿಗಲಿದೆ. ನವಲಗುಂದದಲ್ಲಿ ನಡೆಯುವಂತಹ ಹೋರಾಟವನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ನರಗುಂದ ಹಾಗೂ ನವಲಗುಂದದಲ್ಲಿ ನಮ್ಮವರೇ ಸಚಿವರಿದ್ದಾರೆ. ಅವರು ಮಾತು ಕೊಟ್ಟ ಪ್ರಕಾರವಾಗಿ ಮೀಸಲಾತಿ ನೀಡಬೇಕು ಎಂದರು.

Edited By : PublicNext Desk
Kshetra Samachara

Kshetra Samachara

16/05/2022 01:11 pm

Cinque Terre

17.7 K

Cinque Terre

1

ಸಂಬಂಧಿತ ಸುದ್ದಿ