ಧಾರವಾಡ: ಬೆಳೆಯುತ್ತಿರುವ ವಿದ್ಯಮಾನದಲ್ಲಿ ಜಾನಪದದ ವಿವಿಧ ಪ್ರಕಾರಗಳು ನೇಪತ್ಯಕ್ಕೆ ಸರಿಯುತ್ತಿವೆ. ಭಜನೆ ಎನ್ನುವುದು ಗ್ರಾಮೀಣ ಜನರ ಜೀವನಾಡಿಯಾಗಿದೆ. ಇದು ಒಂದು ಜಾನಪದ ಸಂಗೀತದ ಕಲಾ ಪ್ರಕಾರ. ಈ ಭಜನೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಆಚರಣೆಯಲ್ಲಿದೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರಾ ಸಂಭ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಸದಸ್ಯರು ಭಜನೆ ಮಾಡಿ ಜನರನ್ನು ರಂಜಿಸಿದ್ದಾರೆ. ವಿವಿಧ ಭಜನಾ ಪದಗಳನ್ನು ಹಾಡಿ ಜನರನ್ನು ರಂಜಿಸಿದ ಸದಸ್ಯರು, ಅನೇಕ ತತ್ವಪದಗಳನ್ನೂ ಹಾಡಿದರು.
Kshetra Samachara
09/05/2022 11:31 pm