ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶಿಗೆ ಹೊರಟ ಯಾತ್ರಿಗೆ 30 ಸಾವಿರ ಪ್ರೋತ್ಸಾಹ ಧನ ನೀಡಿದ ತವನಪ್ಪ ಅಷ್ಟಗಿ

ಧಾರವಾಡ: ಪವಿತ್ರ ಕ್ಷೇತ್ರಗಳ ದರ್ಶನದಿಂದ ಮನುಷ್ಯನ ಬದುಕಿನಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯ ಎಂದು ಹಿರಿಯ ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಹೇಳಿದರು.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ಸುಕ್ಷೇತ್ರ ಕಾಶಿ ಯಾತ್ರೆಗೆ ತೆರಳುತ್ತಿದ್ದ ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಿ ಅವರು ಮಾತನಾಡಿದರು.

ನಿತ್ಯದ ಜೀವನದಲ್ಲಿ ಹಲವು ಬಗೆಯ ತೊಂದರೆಗಳು ಎದುರಾಗುತ್ತವೆ. ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇರುತ್ತದೆ. ಜೊತೆಗೆ ಮಾನಸಿಕ ನೆಮ್ಮದಿ ಕೂಡ ಅಗತ್ಯವಿದೆ. ಇದಕ್ಕಾಗಿ ಕೈಕೊಳ್ಳುವ ಪವಿತ್ರ ಕ್ಷೇತ್ರಗಳ ದರ್ಶನದಿಂದ ಮನುಷ್ಯನ ಬದುಕಿನಲ್ಲಿ ಬದಲಾವಣೆ ಕೂಡ ಸಾಧ್ಯವಾಗಬಲ್ಲುದು. ಈ ದಿಸೆಯಲ್ಲಿ ಪವಿತ್ರ ಕಾಶಿ ಕ್ಷೇತ್ರ ಮಹತ್ವ ಪಡೆದುಕೊಂಡಿದೆ ಎಂದು ಅಷ್ಟಗಿ ಹೇಳಿದರು.

ಇದೇ ಸಂದರ್ಭದಲ್ಲಿ ಬಸ್‌ನಲ್ಲಿ ತೆರಳಿದ ಯಾತ್ರಿಗಳಿಗೆ ಅಷ್ಟಗಿ ಅವರು, 30 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ನೀಡಿದರು.

ಗ್ರಾಪಂ ಸದಸ್ಯರಾದ ಮಲ್ಲನಗೌಡ ಗೌಡರ, ಬಸಲಿಂಗಪ್ಪ ಮಂಗಳಗಟ್ಟಿ, ಸತೀಶ ಅಂಗಡಿ, ಹಸನನಾಯಕ್ ನಾಯ್ಕರ್, ಬಸವರಾಜ ಗಡ್ಡಿ, ಗಣ್ಯರಾದ ಶಂಕ್ರಪ್ಪ ಹೊಸಮನಿ, ಯಲ್ಲನಗೌಡ ಗೌಡರ, ಶಿವಪ್ಪ ಗಡ್ಡಿ, ಉಮೇಶ ಅಂಗಡಿ, ಗಂಗಪ್ಪ ಧಾರವಾಡ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/04/2022 10:08 pm

Cinque Terre

5.17 K

Cinque Terre

0

ಸಂಬಂಧಿತ ಸುದ್ದಿ