ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ದಾಸಿಮಯ್ಯನವರು ಕಾಯಕ ನಿಷ್ಠೆಯುಳ್ಳ ಆದ್ಯವಚನಕಾರ: ಅಮರಶೆಟ್ಟಿ

ಧಾರವಾಡ: ಪ್ರಪಂಚದ ಮೊದಲ ವಚನಕಾರ ಹಾಗೂ ಮೊದಲ ಶಿವಶರಣರ ದೇವರ ದಾಸಿಮಯ್ಯನವರು ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ಅವರು ಕಾಯಕ ನಿಷ್ಠೆಯುಳ್ಳ ಆದ್ಯವಚನಕಾರ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳ ಅಧ್ಯಕ್ಷೆ ಸವಿತಾ ವಿಶ್ವನಾಥ ಅಮರಶೆಟ್ಟಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ ಸಭಾಭಾವನದಲ್ಲಿ ಹಮ್ಮಿಕೊಂಡಿದ್ದ, ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದ ಅನುಭವಗಳು ದಾಸಿಮಯ್ಯನವರ ವಚನಗಳಲ್ಲಿವೆ. ತಮ್ಮ ವಚನಗಳ ಮೂಲಕ ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತೋರಿಸಿದ ಬಂಡಾಯಗಾರರು ದಾಸಿಮಯ್ಯನವರು. ಭಕ್ತಿ ಮಾರ್ಗವೇ ಉನ್ನತ ಮಾರ್ಗ ಎಂದು ಭಕ್ತಿಯ ಮಾರ್ಗವನ್ನು ಸಮಾಜದ ಜನರಿಗೆ ಉಡುಗೊರೆಯಾಗಿ ನೀಡಿದ್ದಾರೆ ಅಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ದೇವರ ದಾಸಿಮಯ್ಯನವರ ವಚನಗಳು ಸಕಾರಾತ್ಮಕ ಬದಲಾವಣೆಗೆ ದಾರಿದೀಪವಾಗಿವೆ. ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದವರು ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಕವಲಗೇರಿ ಶಿವಾನಂದ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಕನ್ನಡದ ಮೊಟ್ಟ ಮೊದಲ ವಚನಕಾರ, ಮಂತ್ರಮಯ ಶರೀರವನ್ನು ಹೊಂದಿದವರು, ಪರಿಪೂರ್ಣವಾದ ಆಧ್ಯಾತ್ಮಿಕ ಜೀವನವನ್ನು ನಡೆಸಿದ ಮಹಾನ್ ಬಂಡಾಯಗಾರ ದೇವರ ದಾಸಿಮಯ್ಯನವರು. ತಮ್ಮ ವಚನಗಳ ಮೂಲಕ ಎಲ್ಲರಲ್ಲೂ ಆತ್ಮಸ್ಥೈರ್ಯವನ್ನು ತುಂಬಿದವರು. ಬದುಕಿನ ಓರೆಕೋರೆಗಳು ಅವರ ವಚನಗಳಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ ಎಂದರು.

ಸಾಹಿತಿ ಹಾಗೂ ಸಂಶೋಧಕ ಬಾಗೂರ ಆರ್ ನಾಗರಾಜಪ್ಪ ವಿಶೇಷ ಉಪನ್ಯಾಸ ನೀಡಿದರು. ರಾಧಾ ದೇಸಾಯಿ ಮತ್ತು ಸಂಗಡಿಗರಿಂದ ವಚನ ಗಾಯನ ಜರುಗಿತು.

Edited By : PublicNext Desk
Kshetra Samachara

Kshetra Samachara

07/04/2022 10:03 pm

Cinque Terre

7.75 K

Cinque Terre

0

ಸಂಬಂಧಿತ ಸುದ್ದಿ