ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇಂಧನ ಉಳಿಸಿ ಜಗತ್ತನ್ನು ರಕ್ಷಿಸಿ; ಸವಿತಾ ಅಮರಶೆಟ್ಟಿ

ಧಾರವಾಡ: ಇಂಧನ ಉಳಿಸಿ ಭವಿಷ್ಯ ಹಾಗೂ ಜಗತ್ತನ್ನು ಸಂರಕ್ಷಿಸಬೇಕು. ನವೀಕರಿಸಬಹುದಾದ ಪರ್ಯಾಯ ಇಂಧನಗಳ ಬಳಕೆ ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.

ಧಾರವಾಡ ರಾಯಾಪುರ ಸಮೀಪದ ಖಾಸಗಿ‌ ಹೋಟೆಲ್ ಒಂದರಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಹಯೋಗದಲ್ಲಿ ವಿದ್ಯುತ್, ಗ್ಯಾಸ್ ಉಳಿತಾಯ ಮತ್ತು ಗ್ಯಾಸ್ ಸಿಲಿಂಡರ್ ಸುರಕ್ಷತೆ ಹಾಗೂ ಸೋಲಾರ್ ಉಪಕರಣಗಳ ಬಳಕೆ ಕುರಿತು ಮಹಿಳಾ ಸಂಘ, ಸಂಸ್ಥೆ, ಕ್ಲಬ್ ಸದಸ್ಯರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯುತ್, ಗ್ಯಾಸ್, ಸಿಲಿಂಡರ್, ಸೌರದೀಪ ಬಳಕೆ ಮತ್ತು ಸಂರಕ್ಷಣಾ ವಿಧಾನಗಳನ್ನು ಅರಿಯಬೇಕು ಎಂದರು.

ಶೋಭಾ.ಎಚ್.ಜಿ. ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಇದೆ. ಮಹಿಳೆ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಬೆಳೆಯಬೇಕು, ಎಲ್ಲ ಕ್ಷೆತ್ರಗಳಲ್ಲಿ ಮಹಿಳೆ ಕೆಲಸ ಮಾಡಿ ಯಶಸ್ಸು ಕಂಡಿದ್ದಾಳೆ, ಮಹಿಳೆ ಮಾನಸಿಕವಾಗಿ ಸದೃಢವಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ರಂಗಾಯಣ ನಿರ್ದೇಶಕ ರಮೇಶ್ ಎಸ್.ಪರವಿನಾಯ್ಕರ್ ಮಾತನಾಡಿ, ಸ್ವಚ್ಛ ಭಾರತ್ ಕನಸು ನನಸಾಗಬೇಕಾದರೆ ಮಹಿಳೆಯರ ಪಾತ್ರ ಮುಖ್ಯ. ಗ್ರಾಮೀಣ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಾಟಕಗಳನ್ನು ರಂಗಾಯಣ ಹಮ್ಮಿಕೊಳ್ಳುತ್ತಿದೆ ಎಂದರು.

ಕೆಆರ್‌ಇಡಿಎಲ್ ಪ್ರಾಂತೀಯ ಕಚೇರಿ ಸಹಾಯಕ ಮುಖ್ಯ ವ್ಯವಸ್ಥಾಪಕು ಸವಿತಾ ಎಸ್.ಮೇಟಿ ಮಾತನಾಡಿ, ನವೀಕರಿಸಬಹುದಾದ ವಸ್ತುಗಳ ಬಗ್ಗೆ ತಿಳಿಯಲು ಮತ್ತು ವಿದ್ಯುತ್, ಗ್ಯಾಸ್,ಸೌರಶಕ್ತಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ರುದ್ರಪ್ಪಯ್ಯ , ರೇಷ್ಮೆ ಜಂಟಿ ನಿರ್ದೇಶಕ ಉದಯ ಜವಳಿ, ಗುರುಮೂರ್ತಿ ಹೆಗಡೆ, ಲೀಲಾ ಕಲಕೋಟಿ, ರಶ್ಮಿ ಜೋಶಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

28/03/2022 10:27 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ