ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಬರ್ತ್‌ಡೇ: ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿದ ಅಭಿಮಾನಿಗಳು

ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ಮೊನ್ನೆ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆದಿದೆ.

ಅಲ್ಲಲ್ಲಿ ನೇತ್ರದಾನ, ರಕ್ತದಾನ, ಅನ್ನ ಪ್ರಸಾದ ಹೀಗೆ ಅನೇಕ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ನಡೆಸಿಕೊಟ್ಟಿದ್ದಾರೆ. ಅದೇ ರೀತಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳು ಹನುಮನಕೊಪ್ಪ ಶಾಲೆಯಲ್ಲಿ ಶಾಲಾ ಮಕ್ಕಳೊಂದಿಗೆ ಅಪ್ಪು ಅವರ ಜನ್ಮ ದಿನ ಆಚರಿಸಿದ್ದಾರೆ. ಅಲ್ಲದೇ ಅಪ್ಪು ಭಾವಚಿತ್ರ ಇರುವ ನೋಟ್‌ಬುಕ್‌ಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿ ಸಿಹಿ ಹಂಚಿದ್ದಾರೆ.

ಶಅಪ್ಪು ಅಭಿಮಾನಿಗಳು ಈ ಕಾರ್ಯ ಮಾಡಿದ್ದು, ಹನುಮನಕೊಪ್ಪದಲ್ಲಿ ದೊಡ್ಡ ಪ್ರಮಾಣದಲ್ಲೇ ಕೇಕ್ ಕತ್ತರಿಸಿ ಅಪ್ಪು ಬರ್ತ್‌ಡೇ ಆಚರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/03/2022 08:42 pm

Cinque Terre

15.56 K

Cinque Terre

1

ಸಂಬಂಧಿತ ಸುದ್ದಿ