ಧಾರವಾಡ: ರಾಯಾಪುರದ ಓಸಿಯನ್ ಪರ್ಲ್ ಹೋಟೆಲ್‌ನಲ್ಲಿ ಇಂದು ಕರ್ನಾಟಕ ನವೀಕರಿಸಬಹುದಾದ ಇಂಧನಮೂಲಗಳ ಅಭಿವೃದ್ಧಿ ನಿಗಮ ಏರ್ಪಡಿಸಿದ್ದ ಮಾಧ್ಯಮ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ವಿಕಾಸ್ ಟ್ರಸ್ಟ್ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸೌರಶಕ್ತಿ ಬಳಸಿಕೊಂಡು ಕೃಷಿ ಆಧಾರಿತ ಕಿರು ಉದ್ಯಮಗಳಿಗೆ ಒದಗಿಸುವ ಸೌರ ವಿದ್ಯುತ್ ಉತ್ಪಾದನೆಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
12 ರಿಂದ 24 ವೋಲ್ಟ್ ಸೌರ ವಿದ್ಯುತ್ ಬಳಕೆಯಿಂದ ಹಾಲು ಕರೆಯುವ ಯಂತ್ರ, ಕೋಲ್ಡ್ ಸ್ಟೋರೇಜ್ ಘಟಕ, ಧಾನ್ಯ ಸಂಸ್ಕರಣಾ ಯಂತ್ರ, ಹಿಟ್ಟು ಪದಾರ್ಥಗಳ ಸಂಸ್ಕರಣಾ ಘಟಕ, ಮಡಿಕೆ ಮಾಡುವ ಯಂತ್ರ, ರೊಟ್ಟಿ ಮಾಡುವ ಯಂತ್ರ, ರಾಟೆ, ಮನೆಗಳಿಗೆ ಒದಗಿಸುವ ವಿದ್ಯುತ್ ಬಲ್ಬ್ ಗಳು ಪ್ರಾತ್ಯಕ್ಷಿಕೆಯಲ್ಲಿದ್ದವು.
ಜೈಪುರ ಮೂಲದ ಬ್ಯಾಟರಿ ಕಂಪನಿಯ ಚಾರ್ಜಿಂಗ್ ಬೈಕ್ ಪ್ರಾತ್ಯಕ್ಷಿಕೆಯಲ್ಲಿದ್ದವು. 3 ಗಂಟೆ ಚಾರ್ಜ್ ಮಾಡಿದರೆ 60 ಕಿ.ಮೀ. ರಿಂದ 100 ಕಿ.ಮೀ.ವರೆಗೆ ಓಡುತ್ತದೆ. ಮೊಬೈಲ್ ಚಾರ್ಜಿಂಗ್, ಯುಎಸ್‌ಬಿ ಸಹ ಅಳವಡಿಸಲಾಗಿದೆ. ರಿಮೋಟ್ ಮೂಲಕ ಆನ್ ಮತ್ತು ಆಫ್ ಮಾಡಬಹುದಾಗಿದೆ. ಬೈಕ್‌ನ ಚಕ್ರಗಳನ್ನು ಲಾಕ್ ಮಾಡುವ ಸೌಲಭ್ಯಗಳನ್ನು ಹೊಂದಿದೆ. 72 ಕೆ.ಜಿ. ತೂಕವನ್ನು ಹೊಂದಿದ್ದು, ಸುಮಾರು 150 ಕೆ.ಜಿ. ತೂಕದ ವಸ್ತುಗಳನ್ನು ಸಾಗಿಸಬಹುದು. ಡಿಸ್ಕ್ ಬ್ರೇಕ್ ಗಳನ್ನು ಹೊಂದಿರುತ್ತವೆ. ಟ್ಯೂಬ್ ಲೆಸ್ ಗಾಲಿಗಳನ್ನು ಬೈಕ್ ಗಳಿಗೆ ಅಳವಡಿಸಲಾಗಿದೆ. 72 ಸಾವಿರದಿಂದ ಬೈಕ್ ಗಳು ದೊರೆಯುತ್ತವೆ. ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ, ಸ್ಪೀಡ್ ಅಲರ್ಟ್ ಅಳವಡಿಸಲಾಗಿದೆ ಎಂದು ಬ್ಯಾಟರಿ ಕಂಪನಿಯ ಡೀಲರ್ ಲಕ್ಷ್ಮಣ ಕಮತರ್ ಅವರು ಮಾಹಿತಿ ನೀಡಿದರು.
Kshetra Samachara
09/02/2022 10:02 pm