ಧಾರವಾಡ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಎಸ್ಡಿಪಿಐ ಕಾರ್ಯದರ್ಶಿ ಅಮ್ಜದ್ ಖಾನ್ನನ್ನು ಬಂಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯಾಕೇಂದ್ರಕ್ಕೆ ಯಾವುದೇ ಧರ್ಮದ ಉಡುಪುಗಳನ್ನು ಧರಿಸಿ ಬರದಂತೆ ನೋಡಿಕೊಳ್ಳಬೇಕು. ಹಿಜಾಬ್ ಹಾಗೂ ಬುರ್ಖಾ ಹಾಕಿಕೊಂಡು ಬರುವ ವಿದ್ಯಾರ್ಥಿನಿಯರ ಟಿಸಿ ಕಿತ್ತು ಹೊರಹಾಕಬೇಕು. ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಖಾ ಹಾಕಿಕೊಂಡು ವಿದ್ಯಾಮಂದಿರಕ್ಕೆ ಬಂದರೆ ಹಿಂದೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ ಕೇಸರಿ ಶಾಲು ಹಾಕಿಕೊಂಡು ಹೋಗುವ ಎಚ್ಚರಿಕೆಯನ್ನು ಶ್ರೀರಾಮಸೇನೆ ಕಾರ್ಯಕರ್ತರು ನೀಡಿದರು.
Kshetra Samachara
09/02/2022 02:19 pm