ಧಾರವಾಡ: ಧಾರವಾಡದ ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗಣಪತಿ ನಾಯಕ ಪುಸ್ತಕ ಪುರಸ್ಕಾರ ಪ್ರದಾನದ ಸರಳ ಸಮಾರಂಭ ಡಯಟ್ ಆವರಣದಲ್ಲಿ ಜರುಗಿತು.
ಶಿಕ್ಷಣ ಇಲಾಖೆಯ ಡಿ.ಡಿ.ಪಿ.ಐ. ಮಂಗಲಾ ನಾಯಕ ಅವರು ತಮ್ಮ ತಂದೆ ಉತ್ತರಕನ್ನಡ ಜಿಲ್ಲೆ ಹಿತ್ತಲಮಕ್ಕಿ ಗ್ರಾಮದ ದಿವಂಗತ ಗಣಪತಿ ಬೀರಣ್ಣ ನಾಯಕ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಿಂದ ಈ ಪುಸ್ತಕ ಪುರಸ್ಕಾರಗಳನ್ನು ಪ್ರತಿ ವರ್ಷ ಪ್ರಜಾರಾಜ್ಯೋತ್ಸವದ ಸಂದರ್ಭದಲ್ಲಿ ಡಯಟ್ ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ.
ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಉಪನಿರ್ದೆಶಕಿ ಎನ್.ಕೆ.ಸಾವಕಾರ, ಹಿರಿಯ ಉಪನ್ಯಾಸಕರುಗಳಾದ ಜಯಶ್ರೀ ಕಾರೇಕರ, ವೈ.ಬಿ.ಬಾದವಾಡಗಿ, ಜೆ.ಜಿ. ಸೈಯ್ಯದ್ ಹಾಗೂ ಡೆ. ಚೆ. ಪ್ರಾ. ಶಿ. ಪ್ರತಿಷ್ಠಾನದ ಕಾರ್ಯದರ್ಶಿ ಡಾ.ರೇಣುಕಾ ಅಮಲಝರಿ ಅವರು ವಿದ್ಯಾರ್ಥಿಗಳಾದ ಫಕ್ಕೀರವ್ವ ಗಡದಾರ, ರೂಪಾ ಸುಲದಾಳ, ಅಮೃತಾ ದೇಸರಗಿ, ಬೀಬಿಆಯಿಶಾ ಹೆಬಸೂರ, ರಾಜೇಶ್ವರಿ ಚಂದರಗಿ, ಪ್ರವೀಣ ಗುಳಲಕೊಪ್ಪ ಹಾಗೂ ಕಿರಣ ಬಮ್ಮಿಗಟ್ಟಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು. ಡಯಟ್ ಹಿರಿಯ ಉಪನ್ಯಾಸಕರುಗಳಾದ ಪಾರ್ವತಿ ವಸ್ತ್ರದ ಹಾಗೂ ಡಾ. ಶೋಭಾವತಿ ನಾಯ್ಕರ್, ಏಳೂ ವಿಭಾಗಗಳ ಉಪನ್ಯಾಸಕರು, ಲಿಪಿಕ ನೌಕರರು ಹಾಗೂ ಇತರೇ ಸಿಬ್ಬಂದಿ ಇದ್ದರು. ಪ್ರಭಾನಂದ ಅಂಚಟಗೇರಿ ಸ್ವಾಗತಿಸಿದರು. ಡಾ.ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.
Kshetra Samachara
04/02/2022 10:34 pm