ಧಾರವಾಡ: ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ (ಜ.19) ಇಂದು ಬೆಳಿಗ್ಗೆ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಶ್ರೀ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯೊಂದಿಗೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಸಮಾಜದ ಮುಖಂಡರಾದ ಡಾ.ಎಚ್.ಎನ್. ಮಂಕನಿ, ವಿ.ಡಿ. ಕಾಮರೆಡ್ಡಿ, ಕೆ.ವಿ. ತಿಮ್ಮಾಪೂರ, ಪಿ.ಎಚ್. ನೀರಲಕೇರಿ, ಪಿ.ಹೆಚ್.ಕಿರೇಸೂರ, ವಿ.ಹೆಚ್.ಕರಡ್ಡಿ, ಕೆ.ಎಸ್. ಕರ್ಲವಾಡ, ನಿಂಗರೆಡ್ಡಿ ತಾರಿಕೊಪ್ಪ, ಡಾ. ಕಿರಣ ರೆಡ್ಡಿ ಹೊಂಬಳ, ಶರಣು ಗಿರಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.
Kshetra Samachara
19/01/2022 10:14 pm