ಕಲಘಟಗಿ: ಪಟ್ಟಣದ ಅನ್ನಪೂರ್ಣ ತರಬೇತಿ ಸಂಸ್ಥೆಯಲ್ಲಿ ಬುಧವಾರ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಮೂವತ್ತು ಮಕ್ಕಳು ಭಾಗವಹಿಸಿದ್ದರು. ಐದು ವಿಜೆತರಿಗೆ ಬಹುಮಾನ ನಿಡಲಾಯಿತು.ಮೊದಲನೆ ಬಹುಮಾನ ಅಶ್ವಿನಿ ಹೀರೆಗೌಡರ,ಎರಡನೇ ಬಹುಮಾನ ರೋಹಿಣಿ ಬಡಿಗೇರ,ಮೂರನೇ ಬಹುಮಾನ ಅನ್ನಪೂರ್ಣ ಹರಮಣ್ಣವರ,ನಾಲ್ಕನೇ ಬಹುಮಾನ ವರ್ಷ ತಹಶೀಲ್ದಾರ್,ಐದನೇ ಬಹುಮಾನ ಮಹಾಲಕ್ಷ್ಮಿ ಭರಾಡೆ ಪಡೆದರು.ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನ ನಿಡಲಾಯಿತು.ಕಲೆ ಸಂಸ್ಕೃತಿಗೆ ಹೆಸರು ವಾಸಿಯಾದ ಈ ಸಂಸ್ಥೆಯಲ್ಲಿ ಮಕ್ಕಳಿಗೆ ಕರಾಟೆ ಭರತನಾಟ್ಯ ಸಂಗೀತ ಹಾಗೂ ನೃತ್ಯ ತರಬೇತಿ ನೀಡುತ್ತ ಬಂದಿದೆ.ಈಗ ಸಂಸ್ಥೆಯಲ್ಲಿ ಮಕ್ಕಳಿಗೆ ರಂಗೋಲಿ ಸ್ಪರ್ಧೆ ನಡೆಸುವ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಬಂದಿದೆ. ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುರೆಯಲ್ಲಿ ಎಂದು ಪಕ್ಕಿರೆಶ ನೆಸರೇಕರ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರ ಉದಯ ಗೌಡರ, ಉಪಾಧ್ಯಕ್ಷ ಸಹದೇವ ಹರಮಣ್ಣವರ,ಗಂಗಾಧರ ಹೀರೆಮಠ,ಮದನ ಸೂರ್ಯವಂಶಿ,ಶಶಿಧರಗೌಡ ಪಾಟೀಲ,ಸಂಜೋತ ಉಡುಪಿ,ಅಶ್ವಿನಿ ತಹಶೀಲ್ದಾರ್, ಲಲಿತ ಹೀರೆಮಠ,ಧನಲಕ್ಷ್ಮಿ ಹರಮಣ್ಣವರ ಇದ್ದರು.
Kshetra Samachara
14/10/2021 06:40 pm