ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಬ್ಯಾಪೂರ ಗ್ರಾಮದಲ್ಲಿ ಬ್ಯಾಂಕ್ ವ್ಯವಹಾರ ಕುರಿತು ಜನರಲ್ಲಿ ಜಾಗೃತಿ

ಹುಬ್ಬಳ್ಳಿ: ಕರ್ನಾಟಕ ವಿಶ್ವವಿಧ್ಯಾಲಯ ಧಾರವಾಡ, ಉನ್ನತ ಭಾರತ ಅಭಿಯಾನ ಕೋಶ ಮತ್ತು ಪಿ.ಜಿ. ವಾಣಿಜ್ಯಶಾಸ್ತ್ರ ಅಧ್ಯಾಯನ ವಿಭಾಗ ಹಾಗೂ ಕೆನರಾ ಬ್ಯಾಂಕ್ ಪೀಠ ಇವರ ಜಂಟಿ ಸಹಯೊಗದೊಂದಿಗೆ, ಉನ್ನತ ಭಾರತ ಅಭಿಯಾನವನ್ನು ಕಲಘಟಗಿ ತಾಲ್ಲೂಕಿನ ಗಂಬ್ಯಾಪೂರ ಗ್ರಾಮದಲ್ಲಿ, ಜನರಿಗೆ ಬ್ಯಾಂಕ್ ವ್ಯವಹಾರ ಮತ್ತು ಹಣಕಾಸು ನಿರ್ವಹಣೆಯ ಕುರಿತು ಜಾಗೃತಿ ಮತ್ತು ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಜಾಗೃತಿ ಕಾರ್ಯಕ್ರಮದಲ್ಲಿ, ಡಾ. ಎನ್. ರಾಮಾಂಜನೇಯಲು, ಈಶ್ವರಪ್ಪ ಗುಳಗಣ್ಣವರ, ಡಾ. ಎ. ಎಸ್. ಶಿರಾಳಶೆಟ್ಟಿ, ಡಾ . ಚಂದ್ರಮ್ಮ ಎಮ್, ಗಂಬ್ಯಾಪೂರ ಗ್ರಾಂ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ತರು ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮ ಸಂಘಟನಕಾರ ಶ್ರೀಕಾಂತ ಪಾಟೀಲ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/10/2021 04:28 pm

Cinque Terre

14.42 K

Cinque Terre

0

ಸಂಬಂಧಿತ ಸುದ್ದಿ