ಕಲಘಟಗಿ: ತಾಲೂಕಿನ ಬಿದರಗಡ್ಡಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ರೈತರ ಆರಾಧ್ಯ ದೈವ ಬಲರಾಮ ಹಾಗೂ ಗೋವಿನ ಪೂಜೆಯನ್ನು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ( ಕರ್ನಾಟಕ ಉತ್ತರ ಪ್ರಾಂತ) ಕಲಘಟಗಿ ತಾಲೂಕಾ ಘಟಕದಿಂದ ನೆರವೇರಿಸಲಾಯಿತು.
ಜಿಲ್ಲಾ ಅಧ್ಯಕ್ಷ ವಿವೇಕ್ ಮೋರೆ ಮಾತನಾಡಿ,ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ದೇಶಿ ಗೋವುಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಗುರುನಾಥ ಬೀರನವರ,ಜಿಲ್ಲಾ ಸದಸ್ಯ ಶಿವಾನಂದ ಕಂಪ್ಲಿ,ಸುಬ್ಬಣ್ಣ ಸುಬ್ಬಣ್ಣವರ,ಖಂಡೋಬಾ ಸಂತರು,ಧಾರವಾಡ ತಾಲೂಕಾ ಅಧ್ಯಕ್ಷ ನಾಗಪ್ಪ ಬೆಳ್ಳಿಗಟ್ಟಿ, ತಾಲೂಕಾ ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಪರಶುರಾಮ ಮುಳ್ಳ ಹರವಿ,ಸಿದ್ದಯ್ಯ ಕಟನೂರಮಠ,ಮಂಜಯ್ಯ ಅಣ್ಣಿಗೇರಿ,ಶಂಕರಲಿಂಗ ಹೊಸಮನಿ,ಕಲ್ಲಪ್ಪ ಬೆನಕನ್ನವರ,ಕಲ್ಲಪ್ಪ ತಡಸ,ಶಂಕರಗೌಡ ಪಾಟೀಲ,ಪಕ್ಕಿರಪ್ಪ ಕೆಲಗೇರಿ,ನಾಗರತ್ನ ಹಸರಂಬಿ ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.
Kshetra Samachara
06/10/2021 06:25 pm