ಹುಬ್ಬಳ್ಳಿ: ಐಟಿ-ಬಿಟಿ ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಅವಶ್ಯಕತೆ ಇದೆ. ಅದಕ್ಕಾಗಿ ಸರ್ಕಾರವು ಈ ಭಾಗದತ್ತ ಹೆಚ್ಚು ಗಮನ ಹರಿಸಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಗಡಾದ ಹೇಳಿದರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೈಗಾರಿಕಾ ಧಾರವಾಡ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಸಂಯುಕ್ತಾಶ್ರಯದಲ್ಲಿ ವಾಣಿಜ್ಯ ಸಾಪ್ತಾಹ ರಪ್ತುದಾರರ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ನಿಂದ ಹಲವಾರು ಉದ್ಯಮ ನೆಲಕಚ್ಚಿವೆ. ಆದರೆ ವಿವಿಧ ಉತ್ಪನಗಳು ರಪ್ತು ಮಾತ್ರ ನಿರಂತರವಾಗಿತ್ತು. ಅದಕ್ಕಾಗಿ ಹೊಸ ಉತ್ಪನಗಳನ್ನು ರಪ್ತು ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಕ್ರೇನ್ ಅಗ್ರಿಟೆಕ್ ಮ್ಯಾನೆಜಿಂಗ್ ಡೈರೆಕ್ಟರ್ ವಿವೇಕ ನಾಯಕ್ ಮಾತನಾಡಿ, ಭಾರತದಲ್ಲಿ ಅತೀ ಹೆಚ್ಚು ಹಣ್ಣು ಹಂಪಲು ಬೆಳೆಯುವ ದೇಶವಾಗಿದೆ. 10ವರ್ಷ ಹಿಂದೆ ಭಾರತೀಯ ವಸ್ತುಗಳು ಉತ್ಪನವಾಗುತ್ತಿದ್ದವು ಆದರೆ ಈಗ ಕಡಿಮೆಯಾಗಿದೆ. ಕೃಷಿ ಗುಣ ಮಟ್ಟದಲ್ಲಿ ಮತ್ತು ಉತ್ಪಾನದನೆಯಲ್ಲಿ ಪೈಪೋಟಿ ಮಾಡಬೇಕು ಅದಾಂಗ ಮಾತ್ರ ದೇಶದ ಉತ್ಪನಗಳಿಗೆ ಬೇಡಿಕೆ ಬರುತ್ತದೆ. ಯೂರೋಪ ಮತ್ತು ಬೇರೆ ದೇಶದಲ್ಲಿ ಯುವಜನತೆ ಸ್ಪೈಸಿ ಆಹಾರವನ್ನು ಇಷ್ಟ ಪಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಬೆಳೆಯುವ ಮೆಣಸಿಕಾಯಿ ಉತ್ತಮ ಬೇಡಿಕೆ ಇದೆ ಎಂದು ತಿಳಿಸಿದರು.
ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡಾ ಮಾತನಾಡಿದರು. ರಮೇಶ ಪಾಟೀಲ, ಉಪಧ್ಯಾಕ್ಷ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಉಮೇಶ ಗಡಾದ, ಅಶೋಕ ಗಡಾದ ಇದ್ದರು.
Kshetra Samachara
24/09/2021 02:08 pm