ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಂತ್ವನ ಕೇಂದ್ರಗಳನ್ನು ಮುಚ್ಚಬೇಡಿ.. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ

ಧಾರವಾಡ: ಸರ್ಕಾರಗಳು ರಾಜ್ಯದ 71 ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಸಾಧನಾ ರಾಷ್ಟ್ರೀಯ ಮಹಿಳಾ ಚಿಂತನ ವೇದಿಕೆ ಕರ್ನಾಟಕ ಸಾಂತ್ವನ ಉಳಿಸಿ ಆಂದೋಲನ ಕರ್ನಾಟಕದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದೇಶದ ದೆಹಲಿ, ಹೈದರಾಬಾದ್, ಮುಂಬೈ, ಪಾಟ್ನಾ, ಕೋಲಾರ, ಗದಗ, ಯಾದಗಿರಿ, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಕೊಲೆ ಕೂಡ ನಡೆದಿವೆ. ಇವನ್ನೆಲ್ಲ ನೋಡಿದರೆ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಇದರ ಮಧ್ಯೆ ಸರ್ಕಾರ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಆಶ್ರಯದಂತಿರುವ ಸಾಂತ್ವನ ಕೇಂದ್ರಗಳನ್ನು ಮುಚ್ಚಲು ಹೊರಟಿದೆ. ದೇಶದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಮಹಿಳೆಯರು ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಸಾಂತ್ವನ ಕೇಂದ್ರಗಳನ್ನು ಮುಚ್ಚದೇ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಾಧನಾ ರಾಷ್ಟ್ರೀಯ ಮಹಿಳಾ ಚಿಂತನ ವೇದಿಕೆ ಅಧ್ಯಕ್ಷೆ ಡಾ.ಇಸಾಬೆಲ್ಲಾ ಝೇವಿಯರ್, ವಿಶ್ವೇಶ್ವರಿ ಹಿರೇಮಠ, ಬಸವರಾಜ ಆನೆಗುಂದಿ, ಬಿ.ಐ.ಈಳಗೇರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

14/09/2021 04:29 pm

Cinque Terre

19.85 K

Cinque Terre

1

ಸಂಬಂಧಿತ ಸುದ್ದಿ