ಧಾರವಾಡ : ಭಾರತ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ಪೈಕಿ ವಿದ್ಯುಚ್ಛಕ್ತಿ ಕಾಯ್ದೆಯೂ ಒಂದಾಗಿದ್ದು, ಕೂಡಲೇ ಈ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯುಚ್ಛಕ್ತಿಯನ್ನು ಭಾರತ ಸರ್ಕಾರ ಕಾರ್ಪೋರೇಟ್ ಕಂಪೆನಿಗಳಿಗೆ ಕೊಡುವಂತಹ ತೀರ್ಮಾನ ಕೈಗೊಂಡಿದೆ. ಇದರಿಂದ ದೇಶದ ಕೃಷಿ ವಲಯದ ಮೇಲೆ ದುಷ್ಪರಿಣಾಮವಾಗುವುದು ಖಚಿತ. ಕೃಷಿಯು ಲಾಭದಾಯಕವಲ್ಲದ ಕಾರಣಕ್ಕೆ ಕೃಷಿಯಿಂದ ರೈತರನ್ನು ಹೊರಹಾಕಲು ವಿದ್ಯುಚ್ಛಕ್ತಿ, ರಸಗೊಬ್ಬರಗಳನ್ನು ದುಬಾರಿಗೊಳಿಸಿ ಬಿತ್ತನೆ ಬೀಜಗಳನ್ನು ರೈತನಿಂದ ಕೈ ತಪ್ಪಿಸಿ ಅದನ್ನೂ ದುಬಾರಿಗೊಳಿಸಲು ಸಜ್ಜಾಗಿದ್ದಾರೆ. ಈ ರೀತಿಯ ಜನ ವಿರೋಧಿ ಸರ್ಕಾರವನ್ನು ಹದ್ದು ಬಸ್ತಿಗೆ ತರಲು ಜನರು ಬೀದಿಗಿಳಿಯುವ ಅವಶ್ಯಕತೆಯನ್ನು ಸರ್ಕಾರವೇ ಸೃಷ್ಟಿಸುತ್ತಿದೆ. ಆದ್ದರಿಂದ ವಿದ್ಯುಚ್ಛಕ್ತಿ ಖಾಸಗೀಕರಣ ಕೂಡಲೇ ವಾಪಸ್ ಪಡೆಯಬೇಕು ಎಂದು ರೈತರು ಒತ್ತಾಯಿಸಿದರು.
Kshetra Samachara
10/08/2021 12:48 pm