ಹುಬ್ಬಳ್ಳಿ: ಕೊರೊನಾ, ಲಾಕ್ಡೌನ್, ಸೀಲ್ಡೌನ್ ದಿಂದ ಬಳಲಿ ಬೆಂಡಾಗಿರುವ ಅವಳಿ ನಗರದ ಜನತೆಗೆ ಬಂದ್ ಪ್ರತಿಭಟನೆಯಂತಹ ಕಿರಿಕಿರಿ ಬೇಡವಾಗಿದೆ.
ಇದಕ್ಕೆ ಉದಾಹರಣೆ ಇಂದಿನ ಬಂದ್ ಜನ ಕ್ಯಾರೆ ಎನ್ನದಿರುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಜಾರಿಗೆ ತಂದಿರುವ ಸುಗ್ರೀವಾಜ್ಞೆ ಹಾಗೂ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆನ್ನುವ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿರುವ ಪ್ರತಿಭಟನೆಗೆ ಇದುವರೆಗೂ ಯಾವುದೇ ಸಂಘಟನೆಗಳು ರಸ್ತೆಗೆ ಇಳಿದಿಲ್ಲ ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ಸಹಜ ಸ್ಥಿತಿ ನಿರ್ಮಾಣವಾಗಿದ್ದು,ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೌದು..ಸದ್ಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ ಇಲ್ಲ.ಅಲ್ಲದೇ 10:30 ಕ್ಕೆ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲು ಹೋರಾಟಗಾರರು ನಿರ್ಧಾರ ಮಾಡಿದ್ದು, ಮಧ್ಯಾಹ್ನ 12 ಗಂಟೆಗೆ ಗಬ್ಬೂರು ಬೈಪಾಸ್‌ನಲ್ಲಿ ಹೆದ್ದಾರಿ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ.
Kshetra Samachara
25/09/2020 08:28 am