ಕುಂದಗೋಳ: ತಾಲೂಕಿನ ಹಿರೇಹರಕುಣಿ ಗ್ರಾಮದ ದಾದಾಪೀರ್ ಹುಶ್ಯಾರಲಿ ದರ್ಗಾಕೆ ಈ ಹಿಂದೆ ಪೀಠಾಧಿಪತಿ, ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿದ್ದ ಸೈಯದ್ ಶಾ ಅಲ್ಲಾಖಾದ್ರಿ ಅಜ್ಜನವರು ಸೆ.22 ರಂದು ದೈವಾದೀನರಾಗಿದ್ದು, ಇಡೀ ಕುಂದಗೋಳ ತಾಲೂಕು ಕಂಬನಿ ಮಿಡಿದಿತ್ತು.
ದಿ.ಅಜ್ಜನವರ ಮಖಾಮ್ 9ನೇ ದಿನದ ಕಾರ್ಯಕ್ರಮ ಅಕ್ಟೋಬರ್ 1ರಂದು ಮಧ್ಯಾಹ್ನ 12 ಕ್ಕೆ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ನಡೆಯಲಿದ್ದು ಹಲವಾರು ಮಠದ ಸ್ವಾಮೀಜಿಗಳು, ದರ್ಗಾದ ಪೀರಾಗಳು ಭಾಗವಹಿಸಲಿದ್ದಾರೆ. ಈಗಾಗಲೇ ಸೈಯದ್ ಶಾ ಅಲ್ಲಾಖಾದ್ರಿ ಅಜ್ಜನವರ ದೈವಾದಿನ ಬಳಿಕ ಹಿಂದೂ ಮುಸ್ಲಿಂ ಸಂಪ್ರದಾಯದಂತೆ ವಿವಿಧ ಸ್ವಾಮಿಗಳು ಹಾಗೂ ದರ್ಗಾದ ಪೀರಾಗಳ ಸಮ್ಮುಖದಲ್ಲಿ ಸೈಯದ್ ಶಾ ಅಲ್ಲಾಖಾದ್ರಿ ಅಜ್ಜನವರ ವಂಶಸ್ಥರಾದ ಮುದಶೀರ್ ಅಜ್ಜನವರನ್ನು ಪೀಠಾಧಿಪತಿ ಮಾಡಿದ್ದಾರೆ.
Kshetra Samachara
30/09/2020 05:08 pm