ಹುಬ್ಬಳ್ಳಿ : ಮುಂಬೈ ಕರ್ನಾಟಕ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಎಪಿಎಂಸಿ ಮಾರುಕಟ್ಟೆಗೆ ತರಕಾರಿಗಳ ಆವಕ ಕಡಿಮೆಯಾಗಿದೆ.
ಇದರಿಂದ ಈರುಳ್ಳಿ ಗಗನ ಕುಸಮವಾಗುತ್ತಿದೆ.
ಪ್ರತಿ ಕೆಜಿಗೆ ₹20ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ದರ ಸಧ್ಯಕ್ಕೆ ಪ್ರತಿ ಕೆಜಿಗೆ ₹55 ರಿಂದ ₹65ಕ್ಕೆ ಮಾರಾಟವಾಗುತ್ತಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿಯೂ ಕ್ವಿಂಟಲ್ ಉಳ್ಳಾಗಡ್ಡಿಯ ಬೆಲೆ ₹ 3,200 ರಿಂದ ₹ 5,000ರವರೆಗೆ ಇದೆ.
ಸಣ್ಣ ಗಡ್ಡೆಗಳು ಪ್ರತಿ ಕ್ವಿಂಟಲ್ಗೆ ₹ 2,100 ರಿಂದ 3,500ರವರೆಗೆ, ದೊಡ್ಡ ಗಡ್ಡೆಗಳು ₹ 4,200ರ ಮೇಲೆಯೇ ಮಾರಾಟವಾಗುತ್ತಿವೆ.
'ತೇವಾಂಶ ಹೆಚ್ಚಾಗಿರುವುದರಿಂದ ಸಂರಕ್ಷಿಸಿದ್ದ ಉಳ್ಳಾಗಡ್ಡಿಯೂ ಸಹ ಹಾಳಾಗುತ್ತಿದೆ. ಹೊಲದಲ್ಲಿರುವ ಬೆಳೆಯೂ ನೀರಿನಲ್ಲಿಯೇ ಕೊಳೆಯುತ್ತಿದೆ. ಹಾಗಾಗಿ ಬೆಲೆಯಲ್ಲಿ ಏರಿಕೆಯಾಗಿದೆ' ಎನ್ನಲಾಗುತ್ತಿದೆ.
ಅದೇ ರೀತಿ ಪ್ರತಿ ಕೆಜಿಗೆ ₹20 ರಿಂದ 30ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆಯು ₹40 ರಿಂದ 50ಕ್ಕೆ ಏರಿಕೆಯಾಗಿದೆ.
ತರಕಾರಿಗಳ ಬೆಲೆಯಲ್ಲೂ ಹೆಚ್ಚಳ ಕಾರಣ ಸತತ ಮಳೆಯಿಂದಾಗಿ ತರಕಾರಿ, ಸೊಪ್ಪಿನ ಬೆಳೆಗಳೂ ಸಹ ಹಾಳಾಗಿದ್ದು, ಅವುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಬಹುತೇಕ ತರಕಾರಿಗಳ ಬೆಲೆಯು ₹50 ರೂ.ದಾಟಿದೆ.
Kshetra Samachara
01/10/2020 07:31 am