ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಕಾಂಗ್ರೆಸ್ ಹಾಗೂ ರೈತ ಮುಖಂಡರ ಬಂಧನ-ಬಿಡುಗಡೆ

ಧಾರವಾಡ : ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನೀಡಿದ್ದ ಬಂದ್ ಗೆ ಧಾರವಾಡದಲ್ಲೂ ವಿವಿಧ ರೈತ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಬೆಂಬಲ ಸೂಚಿಸಿದರು.

ಸರ್ಕಾರದ ನೀತಿ ವಿರೋಧಿಸಿ ರಾಯಾಪುರದ ಹೆದ್ದಾರಿಯಲ್ಲಿ ರೈತ ಹಿತರಕ್ಷಣಾ ಪರಿವಾರ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಿದರು. ಇವರ ಧರಣಿಯಿಂದ ಸಾಕಷ್ಟು ವಾಹನ ದಟ್ಟನೆ ಉಂಟಾಗಿತ್ತು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಈ ಧರಣಿ ನಡೆಯಿತು. ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹೆದ್ದಾರಿಯಲ್ಲಿ ಪ್ರತಿಭಟನೆ ಜೋರಾಗಿಯೇ ನಡೆಯಿತು. ಸಾಕಷ್ಟು ಸಮಯದವರೆಗೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಡ ಹೇರಿದರು.

ಒಂದು ಸಮಯದವರೆಗೆ ನೋಡಿದ ಪೊಲೀಸರು ನಂತರ ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

Edited By : Nirmala Aralikatti
Kshetra Samachara

Kshetra Samachara

25/09/2020 12:36 pm

Cinque Terre

44.32 K

Cinque Terre

1

ಸಂಬಂಧಿತ ಸುದ್ದಿ