ಶಾರ್ಟ್ ಸರ್ಕೀಟ್ ಉಂಟಾಗಿ ಧಾರವಾಡದ ಸಿಬಿಟಿ ಹತ್ತಿರ ಇರುವ ಆಕಳವಾಡಿ ಜನರಲ್ ಸ್ಟೋರ್‌ಗೆ ಬೆಂಕಿ ತಗುಲಿದ ಘಟನೆ ಇಂದು ಬೆಳಗಿನಜಾವ ಸಂಭವಿಸಿದೆ.
ಅಂಗಡಿಯಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿದ್ದರಿಂದ ಇಡೀ ಅಂಗಡಿಯೇ ಹೊತ್ತಿ ಉರಿದಿದೆ. ಇದರಿಂದ ಸುಮಾರು 20 ಲಕ್ಷ ಮೌಲ್ಯದ ಸಾಮಾನುಗಳು ಸುಟ್ಟು ಕರಕಲಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಶಹರ ಠಾಣೆ ಪೊಲೀಸರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
Kshetra Samachara
18/07/2022 12:32 pm