ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಯುವಕನನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ಆತನ ಪೋಷಕರು ಠಾಣೆಗೆ ಬಂದು ಹೈಡ್ರಾಮಾವನ್ನೇ ಮಾಡಿದ್ದಾರೆ.
ಐಬಿಎಂಆರ್ ಕಾಲೇಜಿನಲ್ಲಿ ನನ್ನ ಮಗ ಓದುತ್ತಿದ್ದು, ನಾಳೆ ಆತನ ಪರೀಕ್ಷೆಗಳಿವೆ. ಗಲಭೆಯಲ್ಲಿ ನನ್ನ ಮಗ ಇರದೇ ಇದ್ದರೂ ಪೊಲೀಸರು ಆತನನ್ನು ಕರೆದುಕೊಂಡು ಬಂದಿದ್ದಾರೆ. ಆತನ ಹಾಲ್ ಟಿಕೆಟ್ ನೋಡಿ ಎಂದು ಪೋಷಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ನಿಮ್ಮ ಮಗನನ್ನು ವಿಚಾರಣೆ ಮಾಡುತ್ತೇವೆ. ಅಲ್ಲಿಯವರೆಗೂ ನೀವು ಠಾಣೆ ಬಿಟ್ಟು ಹೋಗಿ ಎಂದು ಪೊಲೀಸರು ಆತನ ಪೋಷಕರಿಗೆ ಸೂಚನೆ ನೀಡಿದರು. ಆದರೂ ಮಾಧ್ಯಮದೆದುರು ಹಾಲ್ ಟಿಕೆಟ್ ತೋರಿಸಿ ನನ್ನ ಮಗ ಏನೂ ತಪ್ಪು ಮಾಡದೇ ಇದ್ದರೂ ಆತನನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ ಎಂದು ಪೋಷಕರು ಆರೋಪಿಸಿದರು.
Kshetra Samachara
19/04/2022 05:50 pm