ಹುಬ್ಬಳ್ಳಿ: ಗೃಹಿಣಿ ಅಂದಮೇಲೆ ಮನೆ ಸಂಸಾರ ಮಕ್ಕಳು ಎಂದು ಬ್ಯುಸಿ ಆಗಿಬಿಡುತ್ತಾರೆ. ಆದರೆ ಗೃಹಿಣಿಯೊಬ್ಬರು ಬ್ಯುಸಿ ಶೆಡ್ಯೂಲ್ನಲ್ಲಿ ಫ್ಯಾಶನ್ ಲೋಕಕ್ಕೆ ಕಾಲಿಟ್ಟು ಈಗ ರಾಜ್ಯಮಟ್ಟದಿಂದ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ಅವರು ಯಾರು ಎಂಬುದನ್ನು ತೋರಿಸ್ತೀವಿ ನೋಡಿ...
ಹೌದು. ಹೀಗೆ ತಲೆ ಮೇಲೆ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ ಹೊತ್ತು ನಿಂತಿರುವ ಈ ಮಾಡೆಲ್ ಹೆಸರು ವಿನುತಾ ಸಂದೀಪ್ ಹುಬ್ಬಳ್ಳಿ ನಿವಾಸಿ. ಇದೇ ಆಗಸ್ಟ್ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ಮಿಸೆಸ್ ಇಂಡಿಯಾ ಕರ್ನಾಟಕ -2022ರ ಆರನೇ ಆವೃತ್ತಿಯಲ್ಲಿ ಭಾಗವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರನ್ನರ್ ಅಪ್ ಆಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಹುಬ್ಬಳ್ಳಿ ಕೀರ್ತಿ ಹೆಚ್ಚಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವಿನುತಾ ಸಂದೀಪ್, ಮಿಸೆಸ್ ಇಂಡಿಯಾ ಕರ್ನಾಟಕ - 2022ರಲ್ಲಿ ನೋಂದಾಯಿಸಿದ್ದರು. ಈ ಸ್ಪರ್ಧೆಯಲ್ಲಿ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಎರಡನೇ ರನ್ನರ್ ಅಪ್, ಕ್ಲಾಸಿಕ್ ಮಿಸೆಸ್ ಇಂಡಿಯಾ ಧಾರವಾಡ, ಉಪಶೀರ್ಷಿಕೆ ಬ್ಯೂಟಿಫುಲ್, ಇನ್ವೆಂಟಿವ್ ಕ್ವೀನ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಇನ್ನು ಈ ಸ್ಪರ್ಧೆಗೆ ರಾಜ್ಯದ ವಿವಿಧೆಡೆಯಿಂದ 120ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಅದರಲ್ಲಿ 36 ಫೈನಲಿಸ್ಟ್ ಗಳಲ್ಲಿ ವಿನೂತಾ ಕೂಡ ಆಯ್ಕೆಯಾಗಿದ್ದರು. 40-60ರ ವಯೋಮಾನದ ಮಹಿಳೆಯರಿಗಾಗಿ ಕ್ಲಾಸಿಕ್ ವಿಭಾಗದಲ್ಲಿ ಸ್ಪರ್ಧಿಸಿ ಹಲವಾರು ಪ್ರಶಸ್ತಿ ಗೆದ್ದು, ಕುಟುಂಬಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆ ತಂದಿರುವುದು ಈಗ ಅವರ ಪೋಷಕರು ಸಂತಸಗೊಂಡಿದ್ದಾರೆ.
ಒಟ್ಟಿನಲ್ಲಿ ಸಂಸಾರದ ಜಂಜಾಟದ ನಡುವೆಯೂ, ಫ್ಯಾಶನ್ ಲೋಕದಲ್ಲಿ ಮಿಂಚುತ್ತಿರುವ ವಿನೂತಾ ಸಂದೀಪ್ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂಬುದೆ ಹುಬ್ಬಳ್ಳಿ ಜನತೆ ಅಭಿಲಾಷೆ...
ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/08/2022 05:16 pm