ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಧಾರವಾಡ ನಗರ ಅಕ್ಷರಶಃ ತ್ರಿವರ್ಣ ಧ್ವಜಗಳಿಂದ ಕಂಗೊಳಿಸುತ್ತಿದೆ. ಅದರಲ್ಲೂ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇಂದು ಎಲ್ಲರ ಮನೆ, ಅಂಗಡಿ, ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇತ್ತ ಶಾಲಾ, ಕಾಲೇಜುಗಳಿಂದ ತಿರಂಗಾ ಮೆರವಣಿಗೆ ಕೂಡ ನಡೆಯಿತು.
ಇವೆಲ್ಲದರ ಮಧ್ಯೆ ಗಮನಸೆಳೆದಿದ್ದು ಜೆಎಸ್‌ಎಸ್ ಶಾಲೆಯ ಮಕ್ಕಳ ತ್ರಿವರ್ಣ ಧ್ವಜ. ಈ ಶಾಲೆಯ ಮಕ್ಕಳು ಒಂದು ಕಿಲೋ ಮಿಟರ್‌ನಷ್ಟು ಉದ್ದದ ತ್ರಿವರ್ಣ ಧ್ಜಜವನ್ನು ಪ್ರದರ್ಶನ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಭಾರತ ಮಾತೆಯ ಭಾವಚಿತ್ರ ಮೆರವಣಿಗೆಯೊಂದಿಗೆ ಉದ್ದದ ಧ್ವಜವನ್ನು ವಿದ್ಯಾರ್ಥಿಗಳು ಮೆರವಣಿಗೆ ಮಾಡುವ ಮೂಲಕ ಎಲ್ಲರ ಗಮನಸೆಳೆದರು.
ಸಾವಿರಾರು ಜನ ವಿದ್ಯಾರ್ಥಿಗಳು ಸೇರಿಕೊಂಡು ಧಾರವಾಡದ ಜೆಎಸ್‌ಎಸ್‌ನಿಂದ ಧ್ವಜವನ್ನು ಮೆರವಣಿಗೆ ಮೂಲಕ ತಂದ ವಿದ್ಯಾರ್ಥಿಗಳು ನಗರದ ವಿವಿಧ ರಸ್ತೆಗಳ ಮೂಲಕ ಹಾದು ಮರಳಿ ಜೆಎಸ್‌ಎಸ್ ತಲುಪಿ ಎಲ್ಲರಲ್ಲೂ ದೇಶಪ್ರೇಮ ಉಕ್ಕುವಂತೆ ಮಾಡಿದರು.
Kshetra Samachara
13/08/2022 05:02 pm