ಹಡಪದ ಸಮಾಜದಲ್ಲಿ ಉಂಟಾಗುವ ಅಸಮಾನತೆ ಹಾಗೂ ಸಮಾಜದ ಸಮಸ್ಯೆಗಳ ಚರ್ಚೆಗೆ ಕುಂದಗೋಳ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ವೇದಿಕೆಯಾಯಿತು.
ಕುಂದಗೋಳ ತಾಲೂಕಿನ ಹಡಪದ ಸಮಾಜದವರು ಹಡಪದ ಸಮಾಜದ ಏಳಿಗೆ ಹಾಗೂ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿ ಹಡಪದ ಸಮಾಜಕ್ಕೆ ಬೇಕಾದ ನ್ಯಾಯ, ಸಮಾಜದ ವೃತ್ತಿ ವಿಚಾರ ಹಾಗೂ ಕುಂದಗೋಳ ಪಟ್ಪಣದಲ್ಲಿ ಅಪೂರ್ಣಗೊಂಡ ಹಡಪದ ಅಪ್ಪಣ್ಣನವರ ಕಟ್ಟಡ ಅಭಿವೃಧ್ಧಿ, ಜಾತಿ ವಿಚಾರದಲ್ಲಿ ಹಡಪದ ಸಮಾಜದ ವಿದ್ಯಾರ್ಥಿಗಳ ಏಳಿಗೆ ಕುರಿತಂತೆ ಎಲ್ಲ ಪದಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದರು.
ಬಳಿಕ ಹಡದಪ ಅಪ್ಪಣ್ಣ ಸಮಾಜದ ಜಿಲ್ಲಾ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಒಟ್ಟಾರೆ ಹಡಪದ ಸಮಾಜದ ಆಗು ಹೋಗುಗಳು, ಸಮಾಜದ ಬಲವರ್ಧನೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ ಪಡಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಹಡಪದ ಅಪ್ಪಣ್ಣ ಸಮಾಜದ ಬಂಧುಗಳು ಹಿರಿಯರು ಉಪಸ್ಥಿತರಿದ್ದರು.
Kshetra Samachara
30/07/2022 06:27 pm