ಪ್ರಕೃತಿಯ ಮುನಿಸು, ಕರಗಿ ಸುರಿಯದೆ ಸುಮ್ಮನಾದ ವರಣುದೇವ, ಇತ್ತ ಬಿಸಿಲಿನ ಆರ್ಭಟದ ನಡುವೆಯೂ ಅನ್ನದಾತ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ತಾನೇ ಬಾಡಿಗೆ ಟ್ಯಾಂಕರ್ ಮೂಲಕ ನೀರು ತಂದು ಭೂಮಿಗೆ ಹಾಕಿ ಬೆಳೆ ಬೆಳೆಯುವ ಹಂತಕ್ಕೆ ತಲುಪಿದ್ದಾನೆ.
ಹೌದು ! ಆರಂಭದಲ್ಲಿ ಸುರಿದ ಮುಂಗಾರು ಮಳೆ ದಿನ ಕಳೆದಂತೆ ದುರ್ಬಲವಾಗಿದ್ದು ರೈತಾಪಿ ಜನರು ಸಾವಿರ, ಸಾವಿರದ ಐನೂರು ರೂಪಾಯಿ ನೀಡಿ ಬಾಡಿಗೆ ಟ್ಯಾಂಕರ್ ಮೂಲಕ ನೀರನ್ನು ತಂದು ಭೂಮಿಗೆ ಹಾಕಿ ಹತ್ತಿ ಕಾಳು ಹಾಕುತ್ತಿದ್ದಾರೆ.
ಮಳೆ ದಾರಿ ಕಾಯುತ್ತಾ ಕುಳಿತರೆ ಬೀಜ ಹಾಕುವ ಸಮಯ ಕಳೆದು ಹೋಗುತ್ತದೆ ಎಂಬ ಆತಂಕದಲ್ಲಿ ಅನಾವೃಷ್ಟಿ ನಡುವೆಯೂ ಹತ್ತಿ ಕಾಳು ಹಾಕಲು ರೈತ ಹಣ ಕೊಟ್ಟು ನೀರು ಖರೀದಿಸಿ ಭೂಮಿಗೆ ಹಾಕುವ ಕಷ್ಟಕ್ಕೆ ಸಿಲುಕಿದ್ದಾನೆ.
ಈಗಾಗಲೇ ಬಿತ್ತನೆ ಮಾಡಿದ ಶೇಂಗಾ, ಹೆಸರು ಬೆಳೆಗಳು ಒಣಗುವ ಹಂತದಲ್ಲಿದ್ದು,ಈ ವಾರಾಂತ್ಯದಲ್ಲಿ ಮಳೆ ಸುರಿಯದಿದ್ದರೆ ಅನ್ನದಾತನ ಬೆಳೆ ಅಕ್ಷರಶಃ ನೆಲ ಕಚ್ಚುವುದರಲ್ಲಿ ಸಂಶಯವಿಲ್ಲಾ.
ಒಟ್ಟಾರೆ ರೈತ ಕುಲಕ್ಕೆ ಒಳಿತಾಗಿ ಮಳೆ ಸುರಿಯಲಿ ಎಂಬ ರೈತಾಪಿ ಜನರ ಧಾರ್ಮಿಕ ಆಚರಣೆಗಳಿಗೆ ವರುಣ ಕೃಪೆ ತೋರಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 05:12 pm