ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ಅನ್ನದಾತರ ಪರದಾಟ

ಮೇ ತಿಂಗಳು ಅಂತ್ಯಗೊಂಡಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಬಿತ್ತನೆ ಕಾರ್ಯ ಕೂಡ ಆರಂಭವಾಗಲಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಧಾರವಾಡದಲ್ಲಿ ರಸಗೊಬ್ಬರಕ್ಕಾಗಿ ಅನ್ನದಾತರು ಪರದಾಡುವಂತಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಇದೇ ಜಿಲ್ಲೆಯವರಾಗಿದ್ದು, ರೈತರಿಗೆ ಬೇಕಾದ ರಸಗೊಬ್ಬರ ಪೂರೈಕೆ ಮಾಡುವಲ್ಲಿ ಇಬ್ಬರೂ ನಾಯಕರು ಹಿಂದೆ ಬಿದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದ ರೈತರು ತಮಗೆ ಬೇಕಾದ ಗೊಬ್ಬರ ಪಡೆದುಕೊಳ್ಳುವುದಕ್ಕೋಸ್ಕರ ಪ್ರತಿನಿತ್ಯ ಸೊಸೈಟಿ, ರೈತ ಸಂಪರ್ಕ ಕೇಂದ್ರಗಳಿಗೆ ಎಡತಾಕುತ್ತಿದ್ದು, ಗೊಬ್ಬರ ಮಾತ್ರ ಸಿಗುತ್ತಿಲ್ಲ. ಯೂರಿಯಾ ಗೊಬ್ಬರ ಮಾತ್ರ ಸ್ಟಾಕ್ ಇದ್ದು, ದೊಡ್ಡ ಹರಳಿನ ಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ರೈತರಿಗೆ ಈ ಗೊಬ್ಬರ ಬೇಡವಾಗಿದೆ. ಬದಲಾಗಿ ಸಣ್ಣ ಹರಳಿನ ಗೊಬ್ಬರ ಬೇಕಾಗಿದೆ. ಬಿತ್ತನೆಗೆ ಪ್ರಮುಖವಾಗಿ ಬೇಕಾದ ಡಿಎಪಿ ಗೊಬ್ಬರವೇ ಇಲ್ಲದ್ದರಿಂದ ರೈತರು ರೋಸಿ ಹೋಗಿದ್ದಾರೆ.

ಇದರಿಂದ ಕಂಗಾಲಾದ ರೈತರು ಟ್ರ್ಯಾಕ್ಟರ್ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದ ಧಾರವಾಡ ಜಿಲ್ಲೆಯ ವಿವಿಧ ಊರುಗಳ ರೈತರು, ತಮಗೆ ಬೇಕಾದ ಗೊಬ್ಬರವನ್ನು ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮುಂಗಾರು ಬಿತ್ತನೆ ಸಂದರ್ಭದಲ್ಲೇ ಗೊಬ್ಬರಕ್ಕೆ ಅಭಾವ ಸೃಷ್ಠಿಯಾಗಿದೆ. ಸರ್ಕಾರ ಸೂಕ್ತ ಸಮಯದಲ್ಲಿ ರೈತರಿಗೆ ಗೊಬ್ಬರ ಪೂರೈಕೆ ಮಾಡದೇ ಹೋದಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿಯುವುದು ಶತಸಿದ್ಧ.

Edited By :
Kshetra Samachara

Kshetra Samachara

31/05/2022 05:34 pm

Cinque Terre

20.78 K

Cinque Terre

3

ಸಂಬಂಧಿತ ಸುದ್ದಿ