ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸಿಪಿ ಭೇಟಿಗೆ ನಿರಾಕರಿಸಿದ ಪೊಲೀಸ್ ಆಯುಕ್ತ: ಸಾರ್ವಜನಿಕರ ಗತಿ ಏನು..?

ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಆಂತರಿಕ ಜಗಳವೊಂದು ಬಯಲಿಗೆ ಬಂದಿದ್ದು,ಐಪಿಎಸ್ ಅಧಿಕಾರಿಯನ್ನು ಭೇಟಿ ಮಾಡಲು ಪೊಲೀಸ್ ಆಯುಕ್ತರು ಅವಕಾಶ ನೀಡದೇ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹೌದು..ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ರಿಂದ ಅತಿರೇಕದ ವರ್ತನೆ ನಡೆಯುತ್ತಿದ್ದು,ಡಿಸಿಪಿ ಎಷ್ಟೇ ಬಾರಿ ಮನವಿ ಮಾಡಿದರೂ ಕಮಿಷನರೇಟ್ ಮಾತ್ರ ಭೇಟಿಗೆ ಅವಕಾಶ ನೀಡದೇ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ಡಿಸಿಪಿ ಪತ್ರ ಬರೆದಿದ್ದಾರೆ.

ಐಪಿಎಸ್ ಅಧಿಕಾರಿಯಾಗಿರೋ ಡಿಸಿಪಿ ಕೃಷ್ಣಕಾಂತ್ ಕಳೆದ ಫೆಬ್ರವರಿಯಿಂದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವಳಿ ನಗರದ ಕ್ರೈಂ ಚಟುವಟಿಕೆ ಬಗ್ಗೆ ಚರ್ಚಿಸಲು ಭೇಟಿಗೆ ಅವಕಾಶ ಕೇಳಿದ್ದ ಡಿಸಿಪಿಗೆ ಅವಕಾಶ ನಿರಾಕರಿಸುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಡಿಸಿಪಿ.ತಮಗಾದ ಅನುಭವದ ಬಗ್ಗೆ ಪತ್ರ ಬರೆದಿದ್ದಾರೆ.ಅಲ್ಲದೆ ಗೃಹ ಸಚಿವರು ಕೂಡಾ ಕಮಿಷನರ್ ಗೆ ಎಚ್ಚರಿಕೆ ನೀಡಿದ್ದರು.

ಆದರೆ, ಗೃಹ ಸಚಿವರ ಎಚ್ಚರಿಕೆಗೂ ಬಗ್ಗದೆ ಶೀತಲ ಸಮರ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

06/10/2020 09:05 am

Cinque Terre

40.75 K

Cinque Terre

5

ಸಂಬಂಧಿತ ಸುದ್ದಿ