ಜಗದೀಶ ಶೆಟ್ಟರ್ ಶಾಸಕರಾಗಿ, ಸಚಿವರಾಗಿ ಮಾಜಿ ಮುಖ್ಯಮಂತ್ರಿಗಳಾಗಿ ಕಳೆದ ಎರಡೂವರೆ ದಶಕಗಳಿಂದ ಅವಳಿ ನಗರದ ಅಭಿವೃದ್ಧಿಗೆ ಆಹಿರ್ನಿಶಿ ಶ್ರಮಿಸುತ್ತಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ತಮ್ಮ ಪ್ರಭಾವ ಹಾಗೂ ವರ್ಚಸ್ಸಿನಿಂದ ಕೇಂದ್ರ ಸರಕಾರದ ನೆರವಿನಿಂದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಕೊರೊನಾ ಸಮಯದಲ್ಲಂತೂ ಇವರಿಬ್ಬರು ಕೈಗೊಂಡ ಕ್ರಮಗಳು ವಣಾತೀತ. ಆದರೆ ಕೆಲವರು ಎಲ್ಲವನ್ನು ನಕಾರಾತ್ಮ ದೃಷ್ಟಿಯಿಂದ ನೋಡಿ ಅನಗತ್ಯ ಟೀಕೆ ಮಾಡುತ್ತಿದ್ದಾರೆ.
ಸಚಿವರು ಮಾಡಿರುವ ಅಭಿವೃದ್ಧಿ ಕಾಯಗಳ ಬಗ್ಗೆ ನಗರದ ಕೆಲವು ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬನ್ನಿ ಅವರಿಂದಲೇ ಕೇಳೋಣ.
ವಾಣಿಜ್ಯೋದ್ಯಮ ಬೆಳವಣಿಗೆಗೆ ಪೂರಕ
ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕ ನಿರ್ಲಕ್ಷಿತ ಪ್ರದೇಶ ಎಂಬ ಮಾತಿದೆ ಹೌದು ಅದು ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ.
ಅದಕ್ಕೆ ಉದಾಹರಣೆ ಎಂದರೆ ವಿಮಾನ ನಿಲ್ದಾಣ, ರೇಲ್ವೇ , ಕೇಂದ್ರದ ನಿಧಿಯಿಂದ ರಸ್ತೆಗಳ ಕಾಂಕ್ರೀಟಿಕರಣ. ಇದು ಹುಬ್ಬಳ್ಳಿ ನಗರದ ಲ್ಯಾಂಡ್ ಸ್ಕೇಪ್ ದಲ್ಲಿ ಬದಲಾವಣೆ ತಂದಿದೆ.
ಏರ್ ಪೋರ್ಟದಿಂದ ಗೋಕುಲ್ ರೋಡ್ , ದೇಶಪಾಂಡೆ ನಗರ ಸವಾಯಿ ಗಂಧರ್ವ ಹಾಲ್ ರಸ್ತೆಗಳು ಸಂಪೂರ್ಣ ಸುಧಾರಣೆ ಕಂಡಿವೆ.
ಕೇವಲ ನಾಲ್ಕು ಪ್ಲಾಟ್ ಫಾರ್ಮ ಇದ್ದ ರೇಲ್ವೇ ನಿಲ್ದಾಣ ಇಂದು ಎಂಟಕ್ಕೇರಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಳವೆ ಮೂಲಕ ಮನೆಮನೆಗೆ ಗ್ಯಾಸ್ ಪೂರೈಕೆ ವ್ಯವಸ್ಥೆ ಮಾಡುವಲ್ಲಿ ಸಚಿವ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ಇಷ್ಟೇ ಅಲ್ಲ ಟೆಂಡರ್ ಶ್ಯೂರ್ ರೋಡ್ ಕಾನ್ಸೆಪ್ಟ್ ಅವಳಿ ನಗರ ಹಾಗೂ ಉತ್ತರ ಕರ್ನಾಟಕ ವಾಣಿಜ್ಯೋದ್ಯಮದ ಚಿತ್ರಣವನ್ನೇ ಬದಲಿಸಿದೆ.
ವಿಶೇಷವಾಗಿ ತೋಳನಕೆರೆ ವಿದ್ಯಾನಗರ ರಸ್ತೆ ಅಭಿವೃದ್ಧಿಯು ಆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳುತ್ತಾರೆ ಕೌಸ್ತುಭ ಸಂಶೀಕರ್.
ಸಾಕಷ್ಟು ಅಭಿವೃದ್ಧಿಯಾಗಿವೆ
ಅನೇಕ ಜನ ಹುಬ್ಬಳ್ಳಿಯಲ್ಲಿ ಅಭಿವೃದ್ದಿಯಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿಲ್ಲ. ಸಂಪೂರ್ಣ ಹಾಳಾಗಿದ್ದ ಗೋಕುಲ ರಸ್ತೆ ಸುಧಾರಣೆಯಾಗಿದೆ.
ನಗರದಲ್ಲಿ ರಸ್ತೆ ಕಾಮಗಾರಿ ನಡೆದಿರುವುದರಿಂದ ಕೆಲವೆಡೆ ತೊಂದರೆಯಾಗಿರಬಹುದು. ಕೆಲವೇ ದಿನಗಳಲ್ಲಿ ಅದು ಸರಿಹೋಗುತ್ತದೆ. ತೋಳನಕೆರೆಯಿಂದ ಕಾಡಸಿದ್ದೇಶ್ವರ ಕಾಲೇಜ್ ವರೆಗಿನ ರಸ್ತೆ ಅಭಿವೃದ್ಧಿ ಇರಬಹುದು, ಸುಸಜ್ಜಿತ ಬಿಆರ್ಟಿಎಸ್ ಬಸ್ ಸೌಲಭ್ಯ, ಮೊರಾರ್ಜಿ ನಗರದಲ್ಲಿ ಉದ್ಯಾನವನ ನಿರ್ಮಾಣ, ಓಪನ್ ಜಿಮ್ ಜಗದೀಶ ಶೆಟ್ಟರ್ ಸಾಧನೆಗಳಿಗೆ ಹಿಡಿದ ಕನ್ನಡಿ.
ಲೋಹಿಯಾ ನಗರದಲ್ಲಿ ಚಿಕ್ಕ ಚಿಕ್ಕ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದು ಹೇಳುತ್ತಾರೆ ಮೊರಾರ್ಜಿ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ ಬೆಳಗಲಿ.
ಕಾಮಾಲೆ ಕಣ್ಣಿಂದ ನೋಡಬೇಡಿ
ಅಭಿವೃದ್ದಿಯಾಗಿಲ್ಲ ಎಂದು ಕೆಲವರು ಕಾಮಾಲೆ ಕಣ್ಣಿನಿಂದ ನೋಡುತ್ತಿದ್ದಾರೆ. ಟೆಂಡರ್ ಶ್ಯೂರ್ ರಸ್ತೆ, ಒಳರಸ್ತೆಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೇಲ್ವೇ ನಿಲ್ದಾಣ, ಹೊಸ ಬಸ್ ನಿಲ್ದಾಣ, ಬಿಆರ್ ಟಿಎಸ್ ಬಸ್ ಸಂಚಾರ, ಹವಾನಿಯಂತ್ರಿತ ಕೋರ್ಟ ಕಟ್ಟಡ ಇವೆಲ್ಲ ಸಚಿವ ಜಗದೀಶ ಶೆಟ್ಟರ್.
ಪ್ರಹ್ಲಾದ್ ಜೋಶಿ ಅವರ ಪರಿಶ್ರಮದಿಂದಲೇ ಅಗಿವೆ. ಯಾರದೋ ಮಾತನ್ನು ಕೇಳಿ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಡುತ್ತಾರೆ ಗೋಕುಲ ರೋಡ್ ನಿವಾಸಿ ಸೋಮಶೇಖರ ಶೆಟ್ಟರ್.
ಭೀಮಪ್ಪ ದುರಗಪ್ಪ ತೇರದಾಳ
ಜಗದೀಶ ಶೇಟ್ಟರ್ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.24 ಗಂಟೆ ಕುಡಿಯುವ ನೀರು ಪೂರೈಕೆ, ಉತ್ತಮ ಗಟಾರುಗಳು, ಕಾಂಕ್ರಿಟ್ ರಸ್ತೆಗಳ ಸುಧಾರಣೆ ಸಾಕಷ್ಟು ಆಗಿವೆ.
ಜನರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡಲು ಶೆಟ್ಟರ್ ಶ್ರಮಿಸುತ್ತಿದ್ದಾರೆ ಅದರ ಬಗ್ಗೆ ತಪ್ಪು ಕಲ್ಪನೆ ಬೇಡ ಎನ್ನುತ್ತಾರೆ ಹುಬ್ಬಳ್ಳಿ ರಾಮನಗರದ ಭೀಮಪ್ಪ ದುರಗಪ್ಪ ತೇರದಾಳ.
Kshetra Samachara
02/10/2020 09:47 pm