ಧಾರವಾಡ: ಪೊಲೀಸರೆಂದ್ರೆ ಸಿಡುಕಿನ ಸ್ವಭಾವದವರು ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ. ಆದರೆ, ಅವರಲ್ಲೂ ಮಾನವೀಯತೆ ಇರುತ್ತದೆ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ.
ಹೌದು! ಧಾರವಾಡ ಗ್ರಾಮೀಣ ಠಾಣೆ ಪಿಎಸ್ಐ ಮಹೇಂದ್ರ ನಾಯ್ಕ್ ಅವರು, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರನ್ನು ದೂರದ ಅವರ ಊರಿಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಕೆಲವು ದಿನಗಳ ಹಿಂದೆ ಬೈಪಾಸ್ ಬಳಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಮಧ್ಯಪ್ರದೇಶದ ಇಂದೋರ್ ನಿವಾಸಿ ಈಶ್ವರ ಎಂಬಾತ ಗಾಯಗೊಂಡಿದ್ದ.
ಚಾಪೆ ಮಾರಾಟ ಮಾಡಲು ಬಂದಿದ್ದ ಈಶ್ವರ ಅಪಘಾತದಲ್ಲಿ ಗಾಯಗೊಂಡಿದ್ದ. ಈತನ ಬಳಿ ಚಿಕಿತ್ಸೆಗೂ ಹಣವಿಲ್ಲದೇ ಊರಿಗೆ ಹೋಗಲು ಆಗದೇ ಪರದಾಡುತ್ತಿದ್ದ ಈ ವಿಷಯ ಗೊತ್ತಾದ ಕೂಡಲೇ ಪಿಎಸ್ಐ ಮಹೇಂದ್ರ ನಾಯ್ಕ್, ಆ ವ್ಯಕ್ತಿ ಮಧ್ಯಪ್ರದೇಶಕ್ಕೆ ಹೋಗಲು ಕಾರು ವ್ಯವಸ್ಥೆ ಮಾಡಿ ಆತನ ಖರ್ಚಿಗೆ ಹಣವನ್ನೂ ಕೊಟ್ಟು ಕಳುಹಿಸಿದ್ದಾರೆ.
ಪಿಎಸ್ಐ ಮಹೇಂದ್ರ ಅವರ ಈ ಸಹಾಯಕ್ಕೆ ಈಶ್ವರ, 'ಭಗವಾನ್ ಆಪ್ ಕೋ ಅಚ್ಛಾ ರಖೇ' ಎಂದು ಧನ್ಯವಾದ ಸಲ್ಲಿಸಿದ್ದಾನೆ.
Kshetra Samachara
04/10/2020 08:06 am