ಸೆ.20ರಂದು ಸಿಪಿಸಿ ಲಿಖಿತ ಪರೀಕ್ಷೆ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಪಿಸಿ ಹುದ್ದೆಯ ಲಿಖಿತ ಪರೀಕ್ಷೆಯನ್ನು ಇದೇ ಸೆ.20ರಂದು ಬೆಳಿಗ್ಗೆ 11ರಿಂದ 12-30ರ ವರೆಗೆ ನಡೆಸಲಾಗುತ್ತದೆ.

ಹು-ಧಾ ಮಹಾನಗರದಲ್ಲಿ 800 ಅಭ್ಯರ್ಥಿಗಳಿಗೆ ಒಟ್ಟು 22 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸುತ್ತಿದ್ದು,ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 90 ನಿಮಿಷ ಮುಂಚಿತವಾಗಿ ಹಾಜರಿರಬೇಕು ಅಲ್ಲದೇ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು,ಅಲ್ಲದೇ ಅಭ್ಯರ್ಥಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಎಂದು ಎಡಿಜಿಪಿ ಪೊಲೀಸ್ ನೇಮಕಾತಿ ವಿಭಾಗ ಬೆಂಗಳೂರು ಹಾಗೂ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಪ್ರಕಟಣೆಯಲ್ಲಿ ತಿಳಿಸಿದೆ.

Kshetra Samachara

Kshetra Samachara

11 days ago

Cinque Terre

12.57 K

Cinque Terre

0