ಹುಬ್ಬಳ್ಳಿ:ಇಲ್ಲಿನ ಕರ್ಕಿಬಸವೇಶ್ವರ ದೇವಾಲಯ ಬಳಿ ಕಳೆದ ನವೆಂಬರ್ 3 ರಂದು ರುಕ್ಸಾನಾ ಎಂಬ ನಾಲ್ಕು ವರ್ಷದ ಬಾಲಕಿಯನ್ನು ಅಕೆಯ ಪಾಲಕರು ಬಿಟ್ಟು ಹೋಗಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಮೂಲ್ಯ ಶಿಶುಗೃಹದಲ್ಲಿ ಮಗುವಿಗೆ ರಕ್ಷಣೆ ನೀಡಲಾಗಿದೆ.
ಬಾಲಕಿಯ ಪಾಲಕರು 4 ತಿಂಗಳೊಳಗೆ ಸಂಪರ್ಕಿಸಬೇಕು , ಇಲ್ಲವಾದರೆ ಕಾನೂನುರೀತ್ಯಾ ಮಗುವಿನ ಹಿತರಕ್ಷಣೆಗೆ ಕ್ರಮವಹಿಸಲಾಗುವುದು ಹೆಚ್ಚಿನ ವಿವರಗಳಿಗೆ 0836-2363389 ಸಂಪರ್ಕಿಸಬಹುದು ಎಂದು ಅಮೂಲ್ಯ ಶಿಶುಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
18/11/2020 07:13 pm