ಹುಬ್ಬಳ್ಳಿ: ನೈರುತ್ಯ ವಲಯದಿಂದ ಗಾಡಿ ಸಂಖ್ಯೆ 07415/ 07416 ಶ್ರೀ ಛತ್ರಪತಿ ಶಾಹು ಮಹಾರಾಜ ಟರ್ಮಿನಸ್ ಕೊಲ್ಹಾಪುರ- ತಿರುಪತಿ ಫೆಸ್ಟಿವಲ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಅಧಿಸೂಚನೆ ನೀಡಿತ್ತು. ಪ್ರಯಾಣಿಕರ ಕೊರತೆಯಿಂದಾಗಿ ತಿರುಪತಿಯಿಂದ ನವೆಂಬರ್ 12ರಿಂದ 14ರವರೆಗೆ ಸಂಚಾರವನ್ನು ರದ್ದುಪಡಿಸಲಾಗಿದೆ.
ಈ ಮೊದಲು ರೈಲು ಸಂಖ್ಯೆ 07415/07416 ಶ್ರೀಛತ್ರಪತಿ ಶಾಹು ಮಹಾರಾಜ ಟರ್ಮಿನಸ್ ಕೊಲ್ಹಾಪುರ - ತಿರುಪತಿ ಫೆಸ್ಟಿವಲ್ ಎಕ್ಸ್‌ಪ್ರೆಸ್ ವಿಶೇಷ ಗಾಡಿಯನ್ನು ನವೆಂಬರ್ 28ರಿಂದ 16ರವರೆಗೆ ತಿರುಪತಿಯಿಂದ ಮತ್ತು ಅಕ್ಟೋಬರ್ 30ರಿಂದ ನವೆಂಬರ್ 18ರವರೆಗೆ ಶ್ರೀ ಛತ್ರಪತಿ ಶಾಹು ಮಹಾರಾಜ ಟರ್ಮಿನಸ್ ಕೊಲ್ಹಾಪುರ ಅಧಿಸೂಚನೆ ನೀಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಪ್ರಯಾಣಿಸದೇ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
12/11/2020 09:12 pm