ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರಿಗೆ ನೌಕರರ ಸಹಕಾರಿ ಪತ್ತಿನ ನಿರ್ದೇಶಕ ಮಂಡಳಿ ಚುನಾವಣೆ ಅಧಿಸೂಚನೆ ಪ್ರಕಟ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಗಳ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ.

ಐದು ವರ್ಷಗಳ ಅವಧಿಗೆ ಚುನಾವಣೆ ಜರುಗಿಸಲು ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಚುನಾವಣಾಧಿಕಾರಿ, ಹುಬ್ಬಳ್ಳಿ ನಗರ ತಹಶೀಲ್ದಾರನ್ನು ರಿಟರ್ನಿಂಗ್ ಆಫೀಸರ್ ಆಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಒಟ್ಟು 19 ಆಡಳಿತ ಮಂಡಳಿಯ ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಸಾಮಾನ್ಯ 13, ಮಹಿಳೆ 02 ಹಿಂದುಳಿದ ' ಅ ' ಪ್ರವರ್ಗ 01, ಹಿಂದುಳಿದ ' ಬ ' ಪ್ರವರ್ಗ 01 ಪರಿಶಿಷ್ಟ ಜಾತಿ 01, ಪರಿಶಿಷ್ಟ ಪಂಗಡ 01 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

19.11.2020 ರಂದು ಗುರುವಾರ ಬೆಳಗ್ಗೆ 09.00 ಗಂಟೆಯಿಂದ ಸಂಜೆ 04.00 ಗಂಟೆಯವರೆಗೆ ಹುಬ್ಬಳ್ಳಿ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಮತದಾನ ಜರುಗಲಿದೆ.

ದಿನಾಂಕ 03-11-2020 ಮಂಗಳವಾರದ ಉಮೇದುವಾರಿಕೆ ಸಲ್ಲಿಕೆ ಪ್ರಾರಂಭವಾಗುವುದು. ದಿನಾಂಕ 10-11-2020 ಮಂಗಳವಾರ ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನವಾಗಿದೆ.

ದಿನಗಳಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆವರೆಗೂ ಉಮೇದುವಾರಿಕೆ ಪತ್ರಗಳನ್ನು ಸ್ವೀಕರಿಸಲಾಗುವುದು.

ದಿನಾಂಕ 11-11-2020 ಬುಧವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ಜರುಗುವುದು ಹಾಗೂ ಸಿಂಧುವಾದ ನಾಮಪತ್ರಗಳನ್ನು ಪಕ್ರಟಿಸಲಾಗುವುದು.

ದಿನಾಂಕ 12-11-2020 ಗುರುವಾರ ಮಧ್ಯಾಹ್ನ 03 ಗಂಟೆಗೆ ವರೆಗೆ ಉಮೇದುವಾರಿಕೆ ಪತ್ರಗಳನ್ನು ವಾಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನಂತರ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಚಿಹ್ನೆಯೊಂದಿಗೆ ಪ್ರಕಟಿಸಲಾಗುವುದು.

ದಿನಾಂಕ 14-11-2020 ಶನಿವಾರ ಮಾದರಿ ಮತಪತ್ರಗಳನ್ನು ಪ್ರಕಟಿಸಲಾಗುವುದು. ದಿನಾಂಕ 19.11.2020 ರಂದು ಗುರುವಾರ ಬೆಳಗ್ಗೆ 09.00 ಗಂಟೆಯಿಂದ ಸಂಜೆ 04.00 ಗಂಟೆಯವರೆಗೆ ಹುಬ್ಬಳ್ಳಿ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಮತದಾನ ಜರುಗುವುದು.

ನಂತರ ಮತ ಎಣಿಕೆ ಕಾರ್ಯ ನೆಡಿಸಿ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಗುವುದು.

ಮಿನಿವಿಧಾನ ಸೌಧದ ನಗರ ತಹಶಿಲ್ದಾರರ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ರಿಟರ್ನಿಂಗ್ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

31/10/2020 09:04 pm

Cinque Terre

9.95 K

Cinque Terre

0

ಸಂಬಂಧಿತ ಸುದ್ದಿ