ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂತನ ಕಮಿಷನರ್ ಬಗ್ಗೆ ನಿಮಗೆಷ್ಟು ಗೊತ್ತು: ಇಲ್ಲಿದೆ ನೋಡಿ ಮಾಹಿತಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ತಾರ್ಕಿಕ ಅಂತ್ಯ‌ ದೊರೆತಿದ್ದು, ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್‌ನ ನೂತನ ಆಯುಕ್ತರಾಗಿ ಲಾಬು ರಾಮ್ ಅವರು ನೇಮಕಗೊಂಡಿದ್ದಾರೆ. ಹಲವಾರು ನೋವನ್ನು ಸಹಿಸಿಕೊಂಡ ಅಧಿಕಾರಿ ಹು-ಧಾ ಮಹಾನಗರ ಜನರ ಸೇವೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ರಾಜಸ್ಥಾನದ ಬಾಡಮಾರ್ ಜಿಲ್ಲೆಯಲ್ಲಿ ಜನಿಸಿದ ಲಾಬು ರಾಮ್ 2004ರಲ್ಲಿ ಐಪಿಎಸ್ ತೇರ್ಗಡೆಯಾದರು. ಹೈದರಾಬಾದ್‌ನ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 10 ತಿಂಗಳ ಮೂಲ ತರಬೇತಿಯನ್ನು ಪಡೆದ ಅವರು ಕರ್ನಾಟಕ ಕೇಡರ್ ಅನ್ನು ಆಯ್ಕೆ ಮಾಡಿಕೊಂಡರು.

ರಾಜ್ಯದ ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿರುವ ಐಪಿಎಸ್ ಲಾಬು ರಾಮ್ ಅವರ ಪತ್ನಿ ಗಾಯತ್ರಿ ದೇವಿ 2014 ರಲ್ಲಿ ಕಾರ್ಕಳದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಕಳ್ಳತನದ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರೌಡಿ ಭೀತಿಯನ್ನು ನಿಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

22/10/2020 05:38 pm

Cinque Terre

37.49 K

Cinque Terre

23

ಸಂಬಂಧಿತ ಸುದ್ದಿ