ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಿಕೋದ್ಯಮದಲ್ಲಿ ಸಾಧನೆಗೈದ ಪತ್ರಕರ್ತರಿಗೆ ಪ್ರಶಸ್ತಿ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2019-20ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋ ಗಳಿಗೆ ಈ ಬಾರಿ 6 ವಿಭಾಗದಲ್ಲಿನ 9 ಪ್ರಶಸ್ತಿಗಳಿಗೆ 11 ಜನರನ್ನು ಆಯ್ಕೆ ಮಾಡಲಾಗಿದೆ.

ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ

ಪ್ರಕಾಶ ಶೇಟ್, ಶ್ರೀಮತಿ ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ

ಕೃಷ್ಣಿ ಶಿರೂರ, ಜೀತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ

ಪ್ರಭಾಕರ ನಾಯಕ, ಶ್ರೀ ಸುಲೇಮಾನ ಅಬ್ದುಲ್ ಅಜೀಜಸಾಬ ಮುನವಳ್ಳಿ (ಪೊಲೀಸ್ ಇಲಾಖೆ) ಅತ್ಯುತ್ತಮ ಲೇಖನ ಪ್ರಶಸ್ತಿಗೆ ಪ್ರಮೋದ ಕೆ., ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಅತ್ಯುತ್ತಮ ಲೇಖನ ಪ್ರಶಸ್ತಿಗೆ ನಾಗರಾಜ ಹೆಗಡೆ ಮತ್ತಿಗಾರ,

ಶ್ರೀ ಎಂ.ಡಿ.ಗೊಗೇರಿ ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿಗೆ ಗುರು ಭಾಂಡಗೆ, ಡಾ. ಬಿ.ಎಫ್. ದಂಡಿನ್ ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿಗೆ ಮಂಜುನಾಥ ಹೂಗಾರ,

ಶ್ರೀ ವಸಂತ ಹೊರಟ್ಟಿ (ಆಕ್ಸ್‌ಫರ್ಡ್ ಕಾಲೇಜ್) ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಗೆ ಹರ್ಷ ಕುಲಕರ್ಣಿ ಹಾಗೂ ವಿನಾಯಕ ಪೂಜಾರಿ (ಕ್ಯಾಮೆರಾಮನ್),ದಿ.ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಗೆ ನವೀನ ಪರದೇಶಿ (ವರದಿಗಾರರು),

ನಾರಾಯಣಗೌಡ (ಕ್ಯಾಮೆರಾಮನ್) ಆಯ್ಕೆ ಮಾಡಿ ಧಾಜಿಕಾನಿಪ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Nirmala Aralikatti
Kshetra Samachara

Kshetra Samachara

14/10/2020 08:54 pm

Cinque Terre

15.27 K

Cinque Terre

0

ಸಂಬಂಧಿತ ಸುದ್ದಿ