ಧಾರವಾಡ: ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜನ್ನತಗರದಲ್ಲಿ ನಿನ್ನೆ ಮನೆಯೊಂದು ಕುಸಿದು ಬಿದ್ದಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.ಜನ್ನತನಗರ 8ನೇ ಕ್ರಾಸ್‌ನಲ್ಲಿರುವ ಕಲಾಲ ಎಂಬುವವರಿಗೆ ಸೇರಿದ ಮನೆಯೇ ರಾತ್ರಿ ಕುಸಿದು ಬಿದ್ದಿದೆ. ನಾಲ್ಕು ಜನ ಮನೆಯ ಸದಸ್ಯರು ಮಲಗಿದ್ದ ವೇಳೆಯೇ ಮನೆ ಕುಸಿದು ಬಿದ್ದಿದೆ. ಮೊದಲಿಗೆ ಮನೆಯ ಗೋಡೆಯಿಂದ ಮಣ್ಣು ಕುಸಿದ ಸಪ್ಪಳ ಕೇಳಿದ ಮನೆಯ ಸದಸ್ಯರು ಕೂಡಲೇ ಎದ್ದು ಹೊರಗಡೆ ಓಡಿ ಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಇವರ ಮನೆಯ ಗೋಡೆಯ ಪಕ್ಕವೇ ಪಾಲಿಕೆ ವತಿಯಿಂದ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಚರಂಡಿ ನಿರ್ಮಾಣಕ್ಕೆ ನೆಲ ಅಗೆದಿದ್ದರಿಂದ ಮನೆಯ ಗೋಡೆ ಸಡಿಲಗೊಂಡು ಈ ರೀತಿಯ ದುರಂತ ಸಂಭವಿಸಿದೆ ಎಂಬುದು ಮನೆಯವರ ಆರೋಪವಾಗಿದೆ.
Kshetra Samachara
12/10/2022 12:49 pm